ಬದುಕು ಬರಹ: ವಿಚಾರ ಸಂಕಿರಣ
Update: 2022-01-17 15:21 GMT
ಉಡುಪಿ, ಜ.17: ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಫೆಬ್ರವರಿ ತಿಂಗಳಲ್ಲಿ ಖ್ಯಾತ ಸಾಹಿತಿ ತ.ರಾ.ಸು. ಅವರ ಬದುಕು-ಬರಹ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದ್ದು, ವಿಚಾರ ಸಂಕಿರಣದಲ್ಲಿ ನಡೆಯುವ ಪರ್ಯಾಯ ಗೋಷ್ಠಿಯಲ್ಲಿ ತ.ರಾ.ಸು. ಅವರ ಬದುಕು-ಬರಹ ಕುರಿತ ಪ್ರಬಂಧವನ್ನು ಅರ್ಜಿಯೊಂದಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ರಿಜಿಸ್ಟರ್ ಅಂಚೆ ಅಥವಾ ಕೊರಿಯರ್ ಮೂಲಕ ಸಲ್ಲಿಸಲು ಜನವರಿ 29 ಕೊನೆಯ ದಿನವಾಗಿದೆ.
ಹೆಚ್ಚಿನ ವಿವರಗಳಿಗೆ -http://sahithyaacademy.karnataka.gov.in- ಅಕಾಡೆಮಿಯ ವೆಬ್‌ಸೈಟ್ ಅನ್ನು ಸಂಪರ್ಕಿಸುವಂತೆ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.