ಆರ್ಥಿಕ ವ್ಯವಸ್ಥೆಗೆ ಚೈತನ್ಯ ತುಂಬುವ ಬಜೆಟ್ : ಶಾಸಕ ರಘುಪತಿ ಭಟ್
Update: 2022-02-01 15:49 GMT
ಈ ಬಾರಿಯ ಆಯವ್ಯಯ ದೇಶದ ಆರ್ಥಿಕ ವ್ಯವಸ್ಥೆಗೆ ಹೊಸ ಚೈತನ್ಯ ತುಂಬಲಿದೆ. ಜೊತೆಗೆ ದೂರದೃಷ್ಟಿಯುಳ್ಳ ಬಜೆಟ್ ಆಗಿದ್ದು ಮುಂದಿನ ಭವಿಷ್ಯದ ಭಾರತವನ್ನು ರೂಪಿಸಲು ತಳಹದಿಯನ್ನು ಗಟ್ಟಿ ಮಾಡುವಂತಹ ಅತ್ಯುತ್ತಮ ವಾದ ಬಜೆಟ್ ಆಗಿದೆ.
ಮೀನುಗಾರಿಕಾ ವಲಯಕ್ಕೆ ನೀಡಿದ ವಿಶೇಷ ಕೊಡುಗೆ ಗಾಗಿ ಮತ್ತು ದೇಶದ ಸಮಗ್ರ ಅಭಿವೃದ್ಧಿಯ ದೃಷ್ಟಿಯಲ್ಲಿ ಜನಪರವಾದ ಬಜೆಟ್ ಮಂಡಿಸಿದ ಮೋದಿ ಸರಕಾರಕ್ಕೆ ಅಭಿನಂದನೆ ಸಲ್ಲಿಸಬೇಕು.
-ಕೆ.ರಘುಪತಿ ಭಟ್, ಶಾಸಕರು ಉಡುಪಿ.