ವಿದ್ಯೋದಯ ಕಾಲೇಜಿನಲ್ಲಿ ರಸಾಯನಶಾಸ ಪುನಶ್ಚೇತನ ಕಾರ್ಯಾಗಾರ
ಉಡುಪಿ: ಉಡುಪಿ ವಿದ್ಯೋದಯ ಟ್ರಸ್ಟ್‌ನ ಅಂಗಸಂಸ್ಥೆ ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಉಡುಪಿ ಜಿಲ್ಲಾ ಪ.ಪೂ. ಕಾಲೇಜುಗಳ ರಸಾಯನ ಶಾಸ ಉಪನ್ಯಾಸಕರ ವೇದಿಕೆಯ ಸಹಕಾರದೊಂದಿಗೆ ಒಂದು ದಿನದ ರಸಾಯನಶಾಸ ಪುನಶ್ಚೇತನ ಕಾರ್ಯಾಗಾರ ನಡೆಯಿತು.
ಉಡುಪಿ ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯೋದಯ ಪ.ಪೂ. ಕಾಲೇಜಿನ ಪ್ರಾಂಶುಪಾಲ ಸಂದೀಪ್ ಕುಮಾರ್ ಶುಭ ಹಾರೈಸಿದರು.
ಜಿಲ್ಲಾ ರಸಾಯನ ಶಾಸ ವೇದಿಕೆಯ ಅಧ್ಯಕ್ಷರೂ, ಪಳ್ಳಿ ಸರಕಾರಿ ಪ.ಪೂ. ಕಾಲೇಜಿನ ಪ್ರಾಂಶುಪಾಲರೂ ಆದ ವಸಂತ ಆಚಾರ್ ಸಮಾರಂಭದ ಅಧ್ಯಕ್ಷತೆ ವಹಿಸಿ ಪುನಶ್ಚೇತನ ಕಾರ್ಯಾಗಾರದ ಅನಿವಾರ್ಯತೆಯನ್ನು ವಿವರಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಸರಕಾರಿ ಪ.ಪೂ.ಕಾಲೇಜು ಭಟ್ಕಳದ ಹಿರಿಯ ರಸಾಯನ ಶಾಸ ಉಪನ್ಯಾಸಕ ಎಂ.ಕೆ. ನಾಯ್, ಕ್ಲಿಷ್ಟಕರವಾದ ರಸಾಯನ ಶಾಸ್ತ್ರದ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ಸುಲಭವಾಗಿ ಅರ್ಥವಾಗುವಂತೆ ಕಲಿಕಾ ವಿಧಾನಗಳನ್ನು ಪರಿಚಯಿಸಿದರು.
ಮುಖ್ಯ ಅತಿಥಿಗಳಾದ ಜ್ಞಾನಗಂಗಾ ಪ.ಪೂ. ಕಾಲೇಜಿನ ಪ್ರಾಂಶುಪಾಲರೂ, ರಾಸಾಯನ ಶಾಸ ವೇದಿಕೆಯ ಗೌರವಾಧ್ಯಕ್ಷರೂ ಆ ಯು.ಎಲ್.ಭಟ್, ಕರ್ನಾಟಕ ರಾಜ್ಯ ಪ.ಪೂ. ಕಾಲೇಜುಗಳ ರಸಾಯನಶಾಸ ಉಪನ್ಯಾಸಕರ ಸಂಘದ ಜಿಲ್ಲಾ ಪ್ರತಿನಿ ಮಂಜುನಾಥ ಭಟ್, ನಿವೃತ್ತ ಪ್ರಾಂಶುಪಾಲರೂ ರಸಾಯನಶಾಸ ಉಪನ್ಯಾಸಕರೂ ಆದ ರಮಾಕಾಂತ ರೇವಣಕರ್ ಉಪಸ್ಥಿತ ರಿದ್ದರು.
ಕಾರ್ಯಾಗಾರದಲ್ಲಿ ವಾರ್ಷಿಕ ಪರೀಕ್ಷೆ ಮತ್ತು ಪ್ರಾಯೋಗಿಕ ಪರೀಕ್ಷೆಗಳ ಬಗ್ಗೆ ಚರ್ಚಿಸಲಾಯಿತು. ವೇದಿಕೆಯ ಕಾರ್ಯದರ್ಶಿ ಹರಿಪ್ರಸಾದ ಸ್ವಾಗತಿಸಿ, ವೀಣಾ ನಾಯಕ್ ವಂದಿಸಿದರು. ರಂಜನಾ ಕೆ. ಕಾರ್ಯಕ್ರಮ ನಿರ್ವಹಿಸಿದರು.