ಮಂಗಳೂರು: ಪೊಲೀಸ್ ಗೆ ಚೂರಿ ಇರಿದ ಕಳವು ಆರೋಪಿ
Update: 2022-02-21 15:42 GMT
ಮಂಗಳೂರು, ಫೆ.21: ಕಳವು ಆರೋಪಿಯೊಬ್ಬ ಪೊಲೀಸ್ ಗೆ ಚೂರಿ ಇರಿದು ಪರಾರಿಯಾದ ಘಟನೆ ಸೋಮವಾರ ಸಂಜೆ ನಗರದಲ್ಲಿ ನಡೆದಿದೆ.
ನಗರದ ಸೆಂಟ್ರಲ್ ಮಾರ್ಕೆಟ್ ಬಳಿ ಯುವಕನೊಬ್ಬ ಕಳ್ಳತನ ಮಾಡಿದ ಸಾಮಗ್ರಿ ಮಾರಾಟ ಮಾಡಲು ಬಂದಿದ್ದಾನೆ ಎಂಬ ಮಾಹಿತಿಯ ಮೇರೆಗೆ ಕದ್ರಿ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಹಿಡಿಯಲು ಮುಂದಾದರು. ಆ ವೇಳೆ ಪೊಲೀಸ್ ಸಿಬ್ಬಂದಿ ವಿನೋದ್‌ಗೆ ಆರೋಪಿಯು ಚೂರಿಯಂತಹ ಆಯುಧದಿಂದ ಇರಿದು ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಕಳವು ಆರೋಪಿಯಿಂದ ಇರಿತಕ್ಕೊಳಗಾದ ವಿನೋದ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಕ್ಕೆ ಅಪಾಯವಿಲ್ಲ. ಕಾಸರಗೋಡು ಮೂಲದ ಕಳ್ಳ ಕದ್ದ ವಾಚ್‌ನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದನೆಂಬ ಮಾಹಿತಿ ಲಭ್ಯವಾಗಿತ್ತು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.