ಉಡುಪಿ: ಸಿಎ ಲೋಕೇಶ್ ಶೆಟ್ಟಿ ಆಯ್ಕೆ
Update: 2022-02-22 12:48 GMT
ಉಡುಪಿ, ಫೆ.21: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ಉಡುಪಿ ಶಾಖೆಗೆ 2022-23ನೆ ಸಾಲಿನ ಅಧ್ಯಕ್ಷರಾಗಿ ಸಿಎ ಲೋಕೇಶ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಸಿಎ ಪ್ರಭಾಕರ್ ಎನ್.ನಾಯಕ್, ಕಾರ್ಯದರ್ಶಿಯಾಗಿ ಸಿಎ ಮಹೀಂದ್ರ ಶೆಣೈ ಪಿ., ಖಜಾಂಚಿಯಾಗಿ ಸಿಎ ಇರ್ಚನಾ ಆರ್ ಮೈಯ, ಸಿಕಾಸಾ ಅಧ್ಯಕ್ಷರಾಗಿ ಸಿಎ ಮಲ್ಲೆಶ ಕುಮಾರ್, ಸದಸ್ಯರಾಗಿ ಸಿಎ ರಂಗನಾಥ್ ಆಚಾರ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.