ಬ್ಯಾಂಕ್‌ನಲ್ಲಿ ಅಂಬೇಡ್ಕರ್ ಭಾವಚಿತ್ರ ಆನಾವರಣ

Update: 2022-02-28 14:40 GMT

ಉಡುಪಿ, ಫೆ.28: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವನ್ನು ಇಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪೆರಂಪಳ್ಳಿ ಶಾಖೆಯಲ್ಲಿ ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಅನಾವರಣಗೊಳಿಸಿದರು.

ಕೇಂದ್ರ ಹಣಕಾಸು ಸಚಿವಾಲಯ ಆದೇಶದ ಮೇರೆಗೆ ಉಡುಪಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಇದರ ಪ್ರಾದೇಶಿಕ ಕಚೇರಿಯ ಡಿಜಿಎಂ ಡಾ.ವಾಸಪ್ಪ ಅವರ ನಿರ್ದೇಶನದಂತೆ ಈ ಭಾವಚಿತ್ರವನ್ನು ಇಂದು ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಶಾಖಾಧಿಕಾರಿ ಡಿ.ಮಾಧವನ್, ಆಫೀಸರ್ ಪಾವನಿ, ಹಿರಿಯ ಸಿಬಂದಿಗಳಾದ ಶ್ರೀನಿವಾಸ ತೀರ್ಥಹಳ್ಳಿ, ಸುಧಾ ಕಾಪು, ಪೂರ್ಣಿಮಾ ಹಾಗೂ ಹಲವಾರು ಗ್ರಾಹಕರು ಉಪಸ್ಥಿತರಿದ್ದರು.

ಕೇಂದ್ರ ಹಣಕಾಸು ಸಚಿವಾಲಯ 2006ರ ಸೆ.8ರಂದೇ ದೇಶದ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ಶಾಖೆಗಳಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಅಳವಡಿ ಸುವಂತೆ ಪತ್ರವನ್ನು ಬರೆದಿದ್ದರೂ, ಬಹುತೇಕ ಎಲ್ಲಾ ಬ್ಯಾಂಕ್‌ಗಳು ಇದನ್ನು ನಿರ್ಲಕ್ಷಿಸಿರುವುದನ್ನು ಪತ್ರಿಕೆ ಗಮನ ಸೆಳೆದಿತ್ತು.

ಇದೀಗ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಪೆರಂಪಳ್ಳಿ ಶಾಖೆ ಉಡುಪಿ ಜಿಲ್ಲೆಯಲ್ಲೇ ಪ್ರಥಮವಾಗಿ ಅಂಬೇಡ್ಕರ್ ಭಾವಚಿತ್ರವನ್ನು ತನ್ನ ಶಾಖೆಯಲ್ಲಿ ಆನಾವರಣಗೊಳಿಸಿ ಎಲ್ಲರ ಮೆಚ್ಚಿಗೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News