ಐಎಎಸ್ ಅಧಿಕಾರಿಗಳ ವರ್ಗಾವಣೆ: ರಂಗಪ್ಪ ಬಿಬಿಎಂಪಿ ವಿಶೇಷ ಕಮಿಷನರ್
Update: 2022-03-03 13:17 GMT
ಬೆಂಗಳೂರು, ಮಾ.3: ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ರಂಗಪ್ಪ ಎಸ್. ಅವರನ್ನು ಬಿಬಿಎಂಪಿಯ ವಿಶೇಷ ಕಮಿಷನರ್(ಅಡ್ಮಿನ್) ಆಗಿ ವರ್ಗಾವಣೆ ಮಾಡಲಾಗಿದೆ.
ಮಡಿಕೇರಿ ಉಪ ವಿಭಾಗದ ಹಿರಿಯ ಸಹಾಯಕ ಕಮಿಷನರ್ ಈಶ್ವರ್ ಕುಮಾರ್ ಕಂಡೂ ಅವರನ್ನು ಬೆಂಗಳೂರಿನಲ್ಲಿ ಖಾಲಿಯಿರುವ ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಕಮಿಷನರ್‍ಆಗಿ ವರ್ಗಾವಣೆಯಾಗಿದ್ದಾರೆ.
ಕಲಬುರಗಿಯಲ್ಲಿ ಖಾಲಿಯಿದ್ದ ಸಾರ್ವಜನಿಕ ತಿಳಿವಳಿಕೆ (ಪಬ್ಲಿಕ್ ಇನ್‍ಸ್ಟ್ರಕ್ಟರ್) ವಿಭಾಗದ ಹೆಚ್ಚುವರಿ ಕಮಿಷನರ್ ಹುದ್ದೆಗೆ ಗರಿಮಾ ಪನ್ವರ್ ಅವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಸರಕಾರದ ಆದೇಶ ತಕ್ಷಣ ಜಾರಿಗೆ ಬರುವಂತೆ ಕಾರ್ಯದರ್ಶಿ ಸಂಜಯ್ ಬಿ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.