ವಿದ್ಯಾರ್ಥಿನಿ ನಾಪತ್ತೆ
Update: 2022-03-18 15:54 GMT
ಉಡುಪಿ : ನಗರದ ಹನುಮಂತನಗರ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದ, ನಿಟ್ಟೂರು ಸರಕಾರಿ ಬಾಲಕಿ ಯರ ಬಾಲಮಂದಿರದಲ್ಲಿ ವಾಸವಿದ್ದ ಚೈತ್ರಾ ಆಲಿಯಾಸ್ ಸುಚಿತ್ರಾ (17) ಎಂಬ ಬಾಲಕಿ ನಾಪತ್ತೆಯಾಗಿದ್ದಾರೆ.
೧೬೬ ಸೆ.ಮೀ. ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ತೆಲುಗು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೋಲೀಸ್ ಠಾಣೆಯನ್ನು ಸಂಪರ್ಕಿ ಸುವಂತೆ ನಗರ ಪೋಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.