ಕೊಲೆ ಬೆದರಿಕೆ ಆರೋಪ: ಬಿಜೆಪಿ ಗ್ರಾಪಂ ಸದಸ್ಯನ ವಿರುದ್ಧ ಪ್ರಕರಣ
Update: 2022-03-24 16:17 GMT
ಶಂಕರನಾರಾಯಣ, ಮಾ.29: ಸ್ಥಳೀಯರೊಬ್ಬರಿಗೆ ಮೊಬೈಲ್‌ನಲ್ಲಿ ಕೊಲೆ ಬೆದರಿಕೆಯೊಡ್ಡಿದ್ದಾರೆನ್ನಲಾದ ಶಂಕರನಾರಾಯಣ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ಕೆ.ಶ್ರೀನಿವಾಸ ಸೌಡ ಎಂಬವರ ಮೊಬೈಲ್ ಗೆ ಉಮೇಶ ಶೆಟ್ಟಿ ಕಲ್ಗದ್ದೆ ಫೆ.11ರಂದು ಕರೆ ಮಾಡಿ ನಾಳೆ ನಿನ್ನ ಮುಖ ಒಡೆಯುತ್ತೇನೆ, ನಿನ್ನನ್ನು ಹೀಗೆ ಬಿಟ್ಟರೇ ಜಾಸ್ತಿ ಮಾಡುತ್ತೀಯಾ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.