ಎ.1ರ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮ ನೇರ ಪ್ರಸಾರ

Update: 2022-03-29 15:20 GMT

ಉಡುಪಿ : ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಎ.1ರಂದು ಬೆಳಗ್ಗೆ 11ಗಂಟೆಗೆ ಹೊಸದಿಲ್ಲಿಯ ತಾಲ್ಕಟೋರಾ ಸ್ಟೇಡಿಯಂನಲ್ಲಿ ‘ಪರೀಕ್ಷಾ ಪೇ ಚರ್ಚಾ-2022’ದ 5ನೇ ಆವೃತ್ತಿ ಕಾರ್ಯಕ್ರಮದ ಮುಖಾಂತರ ವಿದ್ಯಾರ್ಥಿಗಳು ಮುಂಬರುವ ಪರೀಕ್ಷಾ ಸಂದರ್ಭದಲ್ಲಿ ಎದುರಿಸುವ ಒತ್ತಡದ ನಿವಾರಣೆ ಹಾಗೂ ಪರೀಕ್ಷೆಗಳನ್ನು ಯಾವುದೇ ಆತಂಕವಿಲ್ಲದೇ ಆತ್ಮವಿಶ್ವಾಸದಿಂದ ಎದುರಿಸುವ ಕುರಿತು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಾದ ನಡೆಸಲಿದ್ದಾರೆ. 

ಪ್ರಧಾನ ಮಂತ್ರಿಯವರ ಜೊತೆಗಿನ ಪರೀಕ್ಷಾ ಪೇ ಚರ್ಚಾ ಸಂವಾದದಲ್ಲಿ ಅವರು ಪರೀಕ್ಷಾ ಭಯವನ್ನು ಹೇಗೆ ಎದುರಿಸಬೇಕು ಎನ್ನುವ ಬಗ್ಗೆ ಮಾತನಾಡ ಲಿದ್ದಾರೆ.

ಈ ಕಾರ್ಯಕ್ರಮವು ದೂರದರ್ಶನದಲ್ಲಿ (ಡಿಡಿ ನ್ಯಾಷನಲ್, ಡಿಡಿ ನ್ಯೂಸ್, ಡಿಡಿ ಭಾರತಿ) ನೇರ ಪ್ರಸಾರವಾಗುತ್ತಿದ್ದು, ರೇಡಿಯೋ ಚಾನಲ್‌ಗಳು, ಟಿವಿ ಚಾನಲ್‌ಗಳು, ಯೂಟ್ಯೂಬ್ ಚಾನೆಲ್, ಡಿಜಿಟಲ್ ಮಾಧ್ಯಮಗಳಲ್ಲೂ ಪ್ರಸಾರಗೊಳ್ಳಲಿವೆ. ಇದರೊಂದಿಗೆ ನರೇಂದ್ರ ಮೋದಿ, ಪಿಎಂಓ ಇಂಡಿಯಾ, ಪಿಐಬಿ ಇಂಡಿಯಾ, ಮೈಗವರ್ನಮೆಂಟ್ ಇಂಡಿಯಾ, ರಾಜ್ಯಸಭಾ ಟಿವಿಗಳಲ್ಲೂ ಪ್ರಸಾರ ವಾಗಲಿದ್ದು, ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಸಾರ್ವಜನಿಕರು ಈ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News