ರೈತರು ಸದೃಢರಾದಷ್ಟೂ ನವಭಾರತವು ಹೆಚ್ಚು ಸಮೃದ್ಧಗೊಳ್ಳುತ್ತದೆ: ಪ್ರಧಾನಿ ಮೋದಿ
Update: 2022-04-10 18:36 GMT
ಹೊಸದಿಲ್ಲಿ,ಎ.10: ರೈತರು ಸದೃಢರಾದಷ್ಟೂ ನವಭಾರತವು ಹೆಚ್ಚು ಸಮೃದ್ಧಗೊಳ್ಳುತ್ತದೆ ಎಂದು ರವಿವಾರ ಹೇಳಿರುವ ಪ್ರಧಾನಿ ನರೇಂದ್ರ ಮೋದಿಯವರು,ಪಿಎಂ ಕಿಸಾನ ಸಮ್ಮಾನ್ ನಿಧಿ ಮತ್ತು ಇತರ ಕೃಷಿ ಸಂಬಂಧಿತ ಯೋಜನೆಗಳು ಕೋಟ್ಯಂತರ ರೈತರಿಗೆ ಹೊಸ ಶಕ್ತಿಯನ್ನು ನೀಡುತ್ತಿವೆ ಎಂದಿದ್ದಾರೆ.
ಈ ಯೋಜನೆಗಳಡಿ 11.3 ಕೋ.ರೈತರ ಬ್ಯಾಂಕ್ ಖಾತೆಗಳಿಗೆ ೧.೮೨ ಲ.ಕೋ.ರೂಗಳ ನೇರ ವರ್ಗಾವಣೆ ಮಾಡಿರುವುದನ್ನು ತೋರಿಸುವ ಗ್ರಾಫಿಕ್ ಚಿತ್ರವೊಂದನ್ನೂ ಮೋದಿ ಟ್ವಟರ್ನಲ್ಲಿ ಹಂಚಿಕೊಂಡಿದ್ದಾರೆ.
‘ನಮ್ಮ ರೈತ ಸೋದರರು ಮತ್ತು ಸೋದರಿಯರ ಬಗ್ಗೆ ದೇಶಕ್ಕೆ ಹೆಮ್ಮೆಯಿದೆ. ಅವರು ಬಲಿಷ್ಠರಾದಷ್ಟೂ ನವಭಾರತವು ಹೆಚ್ಚು ಸಮೃದ್ಧಗೊಳ್ಳುತ್ತದೆ.ಪಿಎಂ ಕಿಸಾನ ಸಮ್ಮಾನ್ ನಿಧಿ ಮತ್ತು ಇತರ ಕೃಷಿ ಸಂಬಂಧಿತ ಯೋಜನೆಗಳು ದೇಶದಲ್ಲಿಯ ಕೋಟ್ಯಂತರ ರೈತರಿಗೆ ಹೊಸ ಶಕ್ತಿಯನ್ನು ನೀಡುತ್ತಿರುವುದು ನನಗೆ ಸಂತಸವನ್ನುಂಟು ಮಾಡಿದೆ ’ಎಂದು ಮೋದಿ ಟ್ವೀಟಿಸಿದ್ದಾರೆ.