ಅಜೆಕಾರು; ಪತಿಯ ಚಿಕಿತ್ಸೆಗೆ ಹಣದ ಅಭಾವ: ಪತ್ನಿ ಆತ್ಮಹತ್ಯೆ

Update: 2022-06-19 04:46 GMT

ಅಜೆಕಾರು : ಅಪಘಾತದಲ್ಲಿ ಗಾಯಗೊಂಡ ಪತಿಯ ಚಿಕಿತ್ಸೆಗೆ ಹಣ ಇಲ್ಲದ ಕಾರಣಕ್ಕಾಗಿ ಪತ್ನಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಎ.13ರಂದು ನಡೆದಿದೆ.

ಮೃತರನ್ನು ಅಂಡಾರು ಗ್ರಾಮದ ಬಾಳೆಹಿತ್ಲು ನಿವಾಸಿ ವನಿತಾ (45) ಎಂದು ಗುರುತಿಸಲಾಗಿದೆ. ಇವರ ಪತಿ ಸತೀಶ್ ರಾವ್ ಎ.9ರಂದು ಹಿರ್ಗಾನ ಬಳಿ ರಸ್ತೆ ಅಪಘಾತವಾಗಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇವರ ಆಪರೇಷನ್‌ಗೆ ಹಣದ ಅಭಾವದಿಂದ ಮನನೊಂದ ವನಿತಾ, ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News