ಮಲ್ಪೆ; ಟ್ಯಾಂಕರ್-ರಿಕ್ಷಾ ಢಿಕ್ಕಿ: ವಿದೇಶಿ ದಂಪತಿ ಸಹಿತ ಮೂವರಿಗೆ ಗಾಯ
Update: 2022-05-18 16:59 GMT
ಮಲ್ಪೆ : ಟ್ಯಾಂಕರೊಂದು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಿದೇಶಿ ಮೂಲದ ದಂಪತಿ ಸಹಿತ ಮೂವರು ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ಮಲ್ಪೆ ಸಿಟಿಜನ್ ಸರ್ಕಲ್ ಬಳಿ ನಡೆದಿದೆ.
ಗಾಯಗೊಂಡವರನ್ನು ಫ್ರಾನ್ಸ್ ದೇಶದ ಗ್ರೆಗೊರ್ ರಿಕೋನೊ(35) ಹಾಗೂ ಅವರ ಪತ್ನಿ ಮಾರ್ಗೊಟ್ ಕ್ವಿಝ್‌ನೆಲ್(30) ಮತ್ತು ರಿಕ್ಷಾ ಚಾಲಕ ಆತ್ರಾಡಿಯ ಪ್ರಜ್ವಲ್ ನಾಯ್ಕ ಎಂದು ಗುರುತಿಸಲಾಗಿದೆ.
ಮದುವೆ ಸಮಾರಂಭಕ್ಕಾಗಿ ಭಾರತಕ್ಕೆ ಬಂದಿದ್ದ ದಂಪತಿ, ಮಣಿಪಾಲದಿಂದ ರಿಕ್ಷಾದಲ್ಲಿ ಮಲ್ಪೆ ಬೀಚ್‌ಗೆ ಬರುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ನೀರು ಸರಬರಾಜು ಮಾಡುವ ಟ್ಯಾಂಕರ್ ರಿಕ್ಷಾಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಿಕ್ಷಾದಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.