ಬಂಟಕಲ್ಲು ನಾಗರಿಕ ಸಮಿತಿ ವತಿಯಿಂದ ಸಾಧಕರಿಗೆ ಸನ್ಮಾನ

Update: 2022-05-30 14:56 GMT

ಶಿರ್ವ : ಬಂಟಕಲ್ಲು ನಾಗರಿಕ ಸಮಿತಿಯ ವತಿಯಿಂದ ಇಂಡಿಯಾ ಬುಕ್ ಆಪ್ ರೆಕಾರ್ಡ್‌ನಲ್ಲಿ ಸ್ಥಾನಗಳಿಸಿದ ಬಂಟಕಲ್ಲು ಹೇರೂರಿನ ಚಿತ್ರಕಲಾ ವಿದೆ ಪ್ರಿಯಾಂಕಾ ಆಚಾರ್ಯ ಮತ್ತು ರಾಜ್ಯಮಟ್ಟದಲ್ಲಿ ಅತ್ಯುತ್ತಮ ನರ್ಸ್ ಪ್ರಶಸ್ತಿ ಪಡೆದ ಶುಶ್ರೂಷಕಿ, ಮೂಲತಃ ಬಂಟಕಲ್ಲು ಮಾಣಿಪಾಡಿಯ ಅನಿತಾ ಕೆಸ್ತಲಿನೊರವರನ್ನು ಶನಿವಾರ ಬಂಟಕಲ್ಲು ಅಂಗನವಾಡಿ ಕೇಂದ್ರದಲ್ಲಿ ಸನ್ಮಾನಿಸ ಲಾಯಿತು.

ಅಧ್ಯಕ್ಷತೆಯನ್ನು ನಾಗರಿಕ ಸಮಿತಿ ಅಧ್ಯಕ್ಷ ಹಾಗೂ ಶಿರ್ವ ಗ್ರಾಪಂ ಅಧ್ಯಕ್ಷ ಕೆ.ಆರ್.ಪಾಟ್ಕರ್ ವಹಿಸಿದ್ದರು. ಉಚಿತ ಅಂಬ್ಯುಲೆನ್ಸ್ ಸೇವೆುಂಲ್ಲಿ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿರುವ ವೀರೇಂದ್ರ ಪಾಟ್ಕರ್ ಕೋಡುಗುಡ್ಡೆ, ಉಮೇಶ್ ರಾವ್ ಹೇರೂರು, ಹರೀಶ್ ಹೇರೂರು, ವಿನ್ಸೆಂಟ್ ಪಲ್ಕೆ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಸಮಿತಿಯ ಉಪಾಧ್ಯಕ್ಷ ಬಿ.ಪುಂಡಲೀಕ ಮರಾಠೆ, ಕೋಶಾಧಿಕಾರಿ ಜಗದೀಶ್ ಆಚಾರ್ಯ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಇಗ್ನೇಷಿಯಸ್ ಡಿಸೋಜ, ಅನಂತರಾಮ ವಾಗ್ಲೆ, ಅರುಂಧತಿ ಜಿ.ಪ್ರಭು, ರೋಹಿಣಿ ನಾಯಕ್, ವಸಂತಿ ಆಚಾರ್ಯ, ವಾಲೆಟ್ ಕೆಸ್ತಲಿನೊ, ಶ್ರೀಧರ ಕಾಮತ್, ಶಂಕರ ದೇವಾಡಿಗ, ಡೇನಿಸ್, ಅಶೋಕ್, ರಾಘವೇಂದ್ರ, ಮೊದಲಾ ದವರು ಉಪಸ್ಥಿತರಿದ್ದರು. ಸಮಿತಿಯ ಕಾರ್ಯದರ್ಶಿ ದಿನೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News