ವಿದ್ಯಾಪೋಷಕ್‌ನ 29ನೇ ಮನೆ ವಿದ್ಯಾರ್ಥಿಗಳಿಗೆ ಹಸ್ತಾಂತರ

Update: 2022-06-11 16:16 GMT

ಉಡುಪಿ, ಜೂ.೧೧: ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಾದ ಬಾರ್ಕೂರಿನ ಕೋಟೆಕೆರೆಯ ಶರತ್ ಕುಮಾರ್ ಮತ್ತು ಜ್ಞಾನೇಶ್ ಕುಮಾರ್ ಇವರಿಗೆ ಉಡುಪಿಯಲ್ಲಿ ಲೆಕ್ಕ ಪರಿಶೋಧಕರಾ ಗಿರುವ ಗಣೇಶ್ ಕಾಂಚನ್‌ರ ಪ್ರಾಯೋಜಕತ್ವದಲ್ಲಿ ನೂತನವಾಗಿ ನಿರ್ಮಿಸಿದ ಮನೆಯನ್ನು ಶನಿವಾರ ಹಸ್ತಾಂತರಿ ಸಲಾಯಿತು.

ನೂತನ ಮನೆಯನ್ನು ಗಣೇಶ್ ಕಾಂಚನ್ ಮತ್ತು ಪ್ರಫುಲ್ಲಾ ಜಿ. ಕಾಂಚನ್ ದಂಪತಿಗಳು ಜ್ಯೋತಿಬೆಳಗಿಸಿ ಉದ್ಘಾಟಿಸಿದರು. ಕಷ್ಟದಲ್ಲಿದ್ದಾಗ ಬೇರೆಯವರು ಸಹಾಯಮಾಡಿದ್ದನ್ನು ಮರೆಯದೆ ನಾವು ಒಳ್ಳೆಯ ಸ್ಥಿತಿಗೆ ಬಂದಾಗ ಸಮಾಜದಲ್ಲಿ ಇನ್ನೊಬ್ಬರಿಗೆ ಸಹಾಯ ಮಾಡುವ ಮೂಲಕ ಋಣಸಂದಾಯ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿ ಬಾರಕೂರಿನ ಉದ್ಯಮಿ ಶೆಟ್ಟಿಗಾರ್ ಇಂಡಸ್ಟ್ರೀಸ್‌ನ ಮಾಲಕ ಶ್ರೀನಿವಾಸ ಶೆಟ್ಟಿಗಾರ್ ಭಾಗವಹಿಸಿದರು. ಯು.ವಿಶ್ವನಾಥ ಶೆಣೈ, ರಾಜಗೋಪಾಲ ಆಚಾರ್ಯ, ತುಳಸೀದಾಸ್ ಕಾಂಚನ್, ವಸಂತ ಕಾಂಚನ್,  ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ.ಭಟ್, ವಿ.ಜಿ. ಶೆಟ್ಟಿ, ಕೋಶಾಧಿಕಾರಿಗಳಾದ ಮನೋಹರ್ ಕೆ., ಪ್ರೊ.ಕೆ.ಸದಾಶಿವ ರಾವ್ ಹಾಗೂ ಸಂಸ್ಥೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

ಇದು ಸಂಸ್ಥೆಯು ದಾನಿಗಳ ನೆರನಿಂದ ಬಡವಿದ್ಯಾರ್ಥಿಗಳಿಗೆ ನಿರ್ಮಿಸಿಕೊಟ್ಟ ೨೯ನೇ ಮನೆಯಾಗಿದ್ದು, ಈ ತಿಂಗಳಿನಲ್ಲಿ ಇನ್ನೂ ೬ ಮನೆಗಳು ಉದ್ಘಾಟನೆ ಗೊಳ್ಳಲಿವೆ ಎಂದು ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸುತ್ತಾ ನುಡಿದರು. ಪ್ರೊ.ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದೊಗೆ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News