ಜೂ.30: ಕಸಾಪದಿಂದ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ
ಉಡುಪಿ : ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ ಮತ್ತು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಇವುಗಳ ಸಹಕಾರದೊಂದಿಗೆ ವೈದ್ಯರ ದಿನಾಚರಣೆ ಪ್ರಯುಕ್ತ ಜಿಲ್ಲೆಯ ೧೦ ವೈದ್ಯ ದಂಪತಿಗಳಿಗೆ ಗೌರವ ಪುರಸ್ಕಾರ ಸಮಾರಂಭವು ಜೂ.೩೦ರಂದು ಮಧ್ಯಾಹ್ನ ೨.೩೦ಕ್ಕೆ ಜರಗಲಿದೆ.
ಜಿಲ್ಲೆಯ ಪ್ರಸಿದ್ಧ ವೈದ್ಯ ದಂಪತಿಗಳಾದ ಡಾ.ಕ್ಯಾಪ್ಟನ್ ಹೇಮಚಂದ್ರ ಹೊಳ್ಳ ಹಾಗೂ ಡಾ.ಸುಲೋಚನ ಹೊಳ್ಳ, ಡಾ.ಭಾಸ್ಕರಾನಂದ ಕುಮಾರ್ ಹಾಗೂ ಡಾ. ನಳಿನಿ, ಡಾ.ದೇವದಾಸ್ ಕಾಮತ್ ಹಾಗೂ ಡಾ.ಸುಧಾ ಕಾಮತ್, ಡಾ.ಪಿ.ವಿ. ಭಂಡಾರಿ ಹಾಗೂ ಡಾ.ಸುಲತಾ ಭಂಡಾರಿ, ಡಾ.ರಾಮಕೃಷ್ಣ ನಾಯಕ್ ಹಾಗೂ ಡಾ.ಗೀತಾ ನಾಯಕ್, ಡಾ.ಭಾಸ್ಕರ ಆಚಾರ್ಯ ಹಾಗೂ ಡಾ.ಸಬಿತಾ ಆಚಾರ್ಯ, ಡಾ.ಎಚ್.ವಿಶ್ವೇಶ್ವರ ಹಾಗೂ ಡಾ.ವನಿತಾಲಕ್ಷ್ಮಿ, ಡಾ.ರಾಮಚಂದ್ರ ಐತಾಳ್ ಹಾಗೂ ಡಾ.ಭಾರ್ಗವಿ ಐತಾಳ, ಡಾ.ಆದರ್ಶ ಹೆಬ್ಬಾರ್ ಹಾಗೂ ಮಧು ಮಯೂರಿ, ಡಾ.ನರೇಂದ್ರ ಕುಮಾರ್ ಎಚ್.ಎಸ್. ಹಾಗೂ ಡಾ. ವೀಣಾ ನರೇಂದ್ರ ಕುಮಾರ್ ಅವರನ್ನು ಗೌರವಿಸಲಾಗು ವುದು ಎಂದು ಕಾರ್ಯ ಕ್ರಮದ ಸಂಚಾಲಕ ವಿಘ್ನೇಶ್ವರ ಅಡಿಗ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.