ಶಿಕ್ಷಣವನ್ನು ವಿಸ್ತಾರ ನೆಲೆಯಲ್ಲಿ ಆಲೋಚಿಸುವುದು ಅಗತ್ಯ: ಸದಾನಂದ

Update: 2022-06-26 13:20 GMT

ಕುಂದಾಪುರ: ಜನಶಕ್ತಿ ಸೇವಾ ಟ್ರಸ್ಟ್ ನಾಡ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಪಡುಕೋಣೆ ಇವರ ಸಹಯೋಗ ದೊಂದಿಗೆ ಪ್ರತಿಭಾ ಪುರಸ್ಕಾರ ಸಮಾರಂಭವು ರವಿವಾರ ನಾಡ ಗುಡ್ಡೆಯಂಗಡಿ ಯಲ್ಲಿರುವ ಜನಶಕ್ತಿ ಕಛೇರಿಯಲ್ಲಿ ಜರಗಿತು.

ಸಮಾರಂಭವನ್ನು ಉದ್ಘಾಟಿಸಿದ ಸಮುದಾಯ ಕುಂದಾಪುರ ಸದಸ್ಯ ಸದಾನಂದ ಬೈಂದೂರು ಮಾತನಾಡಿ, ಎಲ್ಲ ಮಕ್ಕಳಿಗೂ ಒಂದೇ ತೆರನಾದ ಶಿಕ್ಷಣ ಕಲಿಯಲು ಸಾಧ್ಯವಿಲ್ಲ. ಪಾಠಗಳನ್ನು ಓದಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವುದೆ ಸಾಧನೆ ಎಂದು ಮಕ್ಕಳಿಗೆ ಪೋಷಕರು, ಶಿಕ್ಷಕರು ಒತ್ತಡ ಹೇರು ತ್ತಾರೆ. ಶಿಕ್ಷಣ ಎಂಬುದನ್ನು ವಿಸ್ತಾರ ನೆಲೆಯಲ್ಲಿ ನಾವು ಆಲೋಚಿಸುವ ಅಗತ್ಯವಿದೆ. ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಅಲ್ಲಿ ಅವರಿಗೆ ತೊಡಗಲು ಅವಕಾಶವನ್ನು ಹೆಚ್ಚಿಸಬೇಕು ಎಂದರು.

೨೦೨೧-೨೨ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ೬೦೦ ಕ್ಕಿಂತಲೂ ಅಧಿಕ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೯೫ಕ್ಕಿಂತ ಅಧಿಕ ಅಂಕವನ್ನು ಪಡೆದ ೧೫ ಸ್ಥಳೀಯ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷತೆ ಯನ್ನು ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ಪಿಲಿಪ್ ಡಿಸಿಲ್ವಾ ವಹಿಸಿದ್ದರು.

ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ರಾಜೀವ ಪಡುಕೋಣೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿವೈಎಫ್‌ಐ ಅಧ್ಯಕ್ಷ ನಾಗರಾಜ್ ಕುರು, ವಿದ್ಯಾರ್ಥಿ ನಾಯಕಿ ದೀಕ್ಷಿತ ರಜಾರಂಗೊಲಿ, ನಾಡ ಗ್ರಾಮ ಪಂಚಾಯತ್ ಸದಸ್ಯೆ ಶೋಭಾ, ನಾಗರತ್ನ ನಾಡ, ಮನೋರಮ ಭಂಡಾರಿ, ಶಿಲಾವತಿ ಪಡುಕೋಣೆ ಮೊದಲಾದವರು ಉಪಸ್ಥಿತರಿದ್ದರು.

ಡಿವೈಎಫ್‌ಐ ಪಡುಕೋಣೆ ಕಾರ್ಯದರ್ಶಿ ಕಿರಣ್ ಸ್ವಾಗತಿಸಿದರು. ಜನ ಪ್ರತಿನಿಧಿ ಸಂಪಾದಕ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು, ಶ್ರೀಧರ ನಾಡ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News