ಕಾಪು: ಸೌಹಾರ್ದಯುತ ಬಕ್ರೀದ್ ಆಚರಣೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಮನವಿ

Update: 2022-07-09 09:37 GMT

ಕಾಪು, ಜು.9: ಬಕ್ರೀದ್ ಸೌಹಾರ್ದಯುತವಾಗಿ ಆಚರಿಸಲು ಸೂಕ್ತ ಮುಂಜಾಗ್ರತಾ ಕ್ರಮ ವಹಿಸುವ ಕುರಿತು ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ವತಿಯಿಂದ ಕಾಪು ಪೊಲೀಸ್ ವೃತ್ತ ನೀರೀಕ್ಷಕ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ಹಬ್ಬದಂದು ಕುರ್ಬಾನಿ ಮಾಡಲು ಅನುಕೂಲ ಕಲ್ಪಿಸಲು ಮತ್ತು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಡದ ಅದ್ಯಕ್ಷ ಶರ್ಫುದ್ದೀನ್ ಶೇಖ್ ನೇತೃತ್ವದಲ್ಲಿ  ಮನವಿ ಸಲ್ಲಿಸಲಾಯಿತು.

 ಈ ಸಂದರ್ಭದಲ್ಲಿ  ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತಕರ ಘಟಕದ ಉಪಾದಾಕ್ಷರಾದ ಹಮೀದ್ ಯೂಸುಫ್, ಯೂತ್ ಕಾಂಗ್ರಸ್ ಅದ್ಯಕ್ಷ ರಮೀಝ್ ಹುಸ್ಯೆನ್, ಜಿಲ್ಲಾ ಕಾಂಗ್ರೆಸ್ ಮೀನುಗಾರರ ವೇದಿಕೆಯ ಅಧ್ಯಕ್ಷ ರಾಜೇಶ್ ಮೆಂಡನ್, ಹಿಂದುಳಿದ ವರ್ಗದ ಅಧ್ಯಕ್ಷ ದೀಪಕ್ ಕುಮಾರ್, ಅಲ್ಪಸಂಖ್ಯಾತರ ಉಪಾಧ್ಯಕ್ಷ  ನಸೀರ್ ಕಾಪು, ಮಜೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್ ರಾವ್, ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುಲಕ್ಷಣ್ ಪೂಜಾರಿ, ಕಾಂಗ್ರೆಸ್ ಮುಂಖಡರಾದ ಬಾಷು ಸಾಹೇಬ್, ಉಸ್ಮಾನ್ ಮಲ್ಲಾರ್, ಸಿರಾಜುದ್ದೀನ್, ಅಲ್ ರೆಹಾನ್ ಮಲ್ಲಾರ್ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News