ಮಹಿಳೆಗೆ ಲೈಂಗಿಕ ಕಿರುಕುಳ ನೀಡುವ ವಿಡಿಯೋ ವೈರಲ್: ಜಿಲ್ಲಾಧ್ಯಕ್ಷನನ್ನು ಪದಚ್ಯುತಗೊಳಿಸಿದ ಬಿಜೆಪಿ

Update: 2022-07-13 14:12 GMT
Photo: Twitter

ಮುಂಬೈ: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಸೋಲಾಪುರ ಗ್ರಾಮಾಂತರ ಜಿಲ್ಲಾಧ್ಯಕ್ಷ ಶ್ರೀಕಾಂತ್ ದೇಶಮುಖ್ ಅವರನ್ನು ಮಹಾರಾಷ್ಟ್ರ ಬಿಜೆಪಿ ಪದಚ್ಯುತಗೊಳಿಸಿದೆ.

ಸೊಲ್ಲಾಪುರ ಗ್ರಾಮಾಂತರ ಜಿಲ್ಲಾಧ್ಯಕ್ಷ ಶ್ರೀಕಾಂತ್ ದೇಶಮುಖ್ ಅವರು ಪಕ್ಷದ ಮಹಿಳಾ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿ ಬಂದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ರಾಜೀನಾಮೆಯನ್ನು ರಾಜ್ಯ ನಾಯಕತ್ವ ಮಂಗಳವಾರ ಅಂಗೀಕರಿಸಿದೆ.

  

ಶ್ರೀಕಾಂತ್ ಹೋಟೆಲ್‌ನಲ್ಲಿ ಮಹಿಳಾ ಕೆಲಸಗಾರ್ತಿಗೆ ಕಿರುಕುಳ ನೀಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲಾರಂಭಿಸಿದೆ. ಕ್ಲಿಪ್ ವೈರಲ್ ಆದ ನಂತರ, ಪಕ್ಷವು ಶ್ರೀಕಾಂತ್ ಅವರಿಗೆ ರಾಜೀನಾಮೆ ನೀಡುವಂತೆ ಹೇಳಿದೆ ಎಂದು ವೈರಲ್‌ ಆಗಿದೆ.

ರಾಜೀನಾಮೆಯನ್ನು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ದಾದ ಪಾಟೀಲ್ ಅಂಗೀಕರಿಸಿದ್ದಾರೆ. ಇದೀಗ ಈ ಹುದ್ದೆಯನ್ನು ವಿಕ್ರಮ್ ದೇಶಮುಖ್ ಅವರಿಗೆ ತಾತ್ಕಾಲಿಕವಾಗಿ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.  

ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಚಿತ್ರಾ ವಾಘ್ ಮಾತನಾಡಿ, ''ಶ್ರೀಕಾಂತ್ ದೇಶಮುಖ್ ಅವರ ಕುರಿತಾದ ವಿಡಿಯೋ ಹೊರಬಿದ್ದಿದ್ದು, ಅವರು ರಾಜೀನಾಮೆ ನೀಡಿದ್ದಾರೆ.  ವೀಡಿಯೊ ಕ್ಲಿಪ್‌ನಲ್ಲಿ ಕಂಡುಬರುವ ಮಹಿಳೆ ಮುಂದೆ ಬಂದು ಪೊಲೀಸ್ ದೂರು ನೀಡಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ನಡುವೆ, ಮುಂಬೈ ಪೊಲೀಸರು ವಿಡಿಯೋದಲ್ಲಿ ಕಂಡುಬರುವ ಮಹಿಳೆಯ ವಿರುದ್ಧ ಸುಲಿಗೆ ಆರೋಪದಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಎರಡು ದಿನಗಳ ಹಿಂದೆ ದೇಶಮುಖ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ. ಶ್ರೀಕಾಂತ್ ಅವರು ಮಹಿಳೆಯಿಂದ "ಹನಿ-ಟ್ರ್ಯಾಪ್" ಆಗಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದರು.

ಪೊಲೀಸರು ಮಹಿಳೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 384 (ಸುಲಿಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಇದುವರೆಗೂ ಯಾವುದೇ ಬಂಧನವಾಗಿಲ್ಲ. ಸೋಲಾಪುರ ಗ್ರಾಮಾಂತರ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷರು ತಮ್ಮೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎಂದು ಮಹಿಳೆ ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಶ್ರೀಕಾಂತ್ ಮತ್ತೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರಿಂದ ತನಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ಒಂದೂವರೆ ವರ್ಷಗಳ ಹಿಂದೆ ಶ್ರೀಕಾಂತ್ ಅವರನ್ನು ಬಿಜೆಪಿಯ ಸೊಲ್ಲಾಪುರ ಜಿಲ್ಲಾ ಗ್ರಾಮಾಂತರ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News