ಉದಯ ಗಾಣಿಗ ಕುಟುಂಬಕ್ಕೆ ತಕ್ಷಣ ಪರಿಹಾರ ನೀಡಲು ಆಗ್ರಹ
ಉಡುಪಿ: ಕುಂದಾಪುರ ತಾಲೂಕಿನ ಎಡಮೊಗ್ಗೆ ಗ್ರಾಮದ ಉದಯ ಗಾಣಿಗ ಅವರ ಕೊಲೆ ನಡೆದು ಒಂದು ವರ್ಷ ಕಳೆದರೂ ಯಾವುದೇ ರೀತಿಯ ಪರಿಹಾರ ನೀಡದೆ ರಾಜ್ಯ ಸರಕಾರ ವಂಚನೆ ಮಾಡಿದೆ ಎಂದು ಅಸೋಸಿಯೇ ಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಉಡುಪಿ ಜಿಲ್ಲೆ ಆಗ್ರಹಿಸಿದೆ.
ಈ ಕೊಲೆಯಲ್ಲಿ ಬಿಜೆಪಿಯ ಪ್ರಮುಖ ನಾಯಕರುಗಳು ನೇರ ಭಾಗಿಯಾಗಿ ದ್ದಾರೆ ಎಂಬ ಗುರುತರವಾದ ಆರೋಪ ಇದೆ. ಆ ಹಿನ್ನಲೆಯಲ್ಲಿ ಈಗಾಗಲೇ ನಿಯೋಜಿತರಾಗಿರುವ ಕೇಸಿನ ನೈಜತೆಯನ್ನು ಅರಿತಿರುವ ಸರಕಾರಿ ವಕೀಲರನ್ನು ವರ್ಗವಾಣೆ ಮಾಡಿ ಪ್ರಕರಮದ ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ.
ಆದುದರಿಂದ ಕೊಲೆಯಾದ ಉದಯ ಗಾಣಿಗ ಅವರ ಪತ್ನಿ ಮಕ್ಕಳಿಗೆ ಯಾವುದೇ ರೀತಿಯ ಆದಾಯದ ಮೂಲ ಇಲ್ಲದೆ ದಿನ ಸಾಗಿಸಲು ಕಷ್ಟಸಾಧ್ಯ ವಾಗಿದೆ. ಒಂದು ವೇಳೆ ರಾಜಕೀಯ ಬೇಳೆ ಬೆಯಿಸುವಂತಹ ಘಟನೆ ಯಾಗಿದಿದ್ದರೆ ಇಷ್ಟರಲ್ಲಿ ಎಲ್ಲಾ ರೀತಿಯ ಪ್ರತಿಭಟನೆಗಳು ನಡೆಸುತ್ತಿದ್ದರಲ್ಲದೆ, ಕೋಟಿಗಟ್ಟಲೆ ಪರಿಹಾರ ಹರಿದು ಬರುತ್ತಿತ್ತು. ಇಲ್ಲಿ ಸಂಘಪರಿವಾರದ ನಾಯಕರೇ ಭಾಗಿಯಾಗಿರುವುದರಿಂದ ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ. ಆದ್ದರಿಂದ ತಕ್ಷಣ ಮೃತರ ಕುಟುಂಬಕ್ಕೆ ರಾಜ್ಯ ಸರಕಾರ ಪರಿಹಾರ ಒದಗಿಸುವುದ ರೊಂದಿಗೆ ಕೊಲೆಗಾರರನ್ನು ಕಠಿಣ ಕಾನೂನಿನ ಮೂಲಕ ಶಿಕ್ಷಿಸಬೇಕು. ಇಲ್ಲದಿದ್ದಲ್ಲಿ ಸರಕಾರದ ವಿರುಧ್ಧ ವಿವಿಧ ಸ್ತರದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಹುಸೇನ್ ಕೋಡಿಬೆಂಗ್ರೆ ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.