ಕೊಪ್ಪಳ | ಹುಲಿಹೈದರ್ ಗ್ರಾಮದಲ್ಲಿ ಘರ್ಷಣೆ ಪ್ರಕರಣ: ಮೂವರು ಪೊಲೀಸ್ ಸಿಬ್ಬಂದಿ ಸೇರಿ ನಾಲ್ವರು ಅಮಾನತು

Update: 2022-08-25 16:42 GMT
ಸಾಂದರ್ಭಿಕ ಚಿತ್ರ

ಕೊಪ್ಪಳ: ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮದಲ್ಲಿ ಆಗಸ್ಟ್‌ 11ರಂದು ನಡೆದಿದ್ದ ಗುಂಪು ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಪೊಲೀಸ್ ಸಿಬ್ಬಂದಿ ಹಾಗೂ ಒಬ್ಬ ಅಧಿಕಾರಿಯನ್ನು ಗುರುವಾರ ಅಮಾನತು ಮಾಡಲಾಗಿದೆ.

ಘರ್ಷಣೆಯಲ್ಲಿ  ಪಾಷಾ ವಲಿ ಮತ್ತು ಯಂಕಪ್ಪ ತಳವಾರ ಹತ್ಯೆಗೀಡಾಗಿದ್ದು, ಹಲವರು ಗಾಯಗೊಂಡಿದ್ದರು.  

ಗ್ರಾಮದಲ್ಲಿ ದಲಿತರಿಗೆ ಬೆದರಿಕೆ ಇರುವುದಾಗಿ ಸಣ್ಣಹನುಮಂತ ಎಂಬವರು ಆ.1ರಂದು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದರು. ಆದರೆ, ಪೊಲೀಸರು ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. 

ಇದನ್ನೂ ಓದಿ:  ಪೊಲೀಸರ ಕರ್ತವ್ಯ ಲೋಪದಿಂದಲೇ ಕೊಪ್ಪಳದ ಹುಲಿಹೈದರ್ ಗ್ರಾಮದಲ್ಲಿ ಗಲಭೆ: ಬಹುತ್ವ ಕರ್ನಾಟಕ ಆರೋಪ

ಇದೀಗ  ತಪ್ಪಿಸಬಹುದಾಗಿದ್ದ ಘಟನೆ ಬಗ್ಗೆ ನಿರ್ಲಕ್ಷ್ಯ ತೋರಿದ ಕಾರಣಕ್ಕಾಗಿ ಕನಕಗಿರಿ ಠಾಣೆಯ ಪಿಎಸ್ಐ ಪರಸಪ್ಪ ಭಜಂತ್ರಿ, ಎಎಸ್ಐ ಮಂಜುನಾಥ್‌, ಮುಖ್ಯಪೇದೆ ಹನುಮಂತಪ್ಪ ಮತ್ತು ಸಂಗಪ್ಪ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ತಿಳಿಸಿದ್ದಾರೆ.

ಪ್ರಕರಣ ಸಂಬಂಧ 70ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಹಲವರ ವಿರುದ್ಧ ಎಫ್ ಐಆರ್ ದಾಖಲಾಗಿದೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News