ಸಿಡಿಆರ್ ಪ್ರಕಾರ ಆರೋಪಿ ಸ್ಥಳದಲ್ಲಿಲ್ಲವೆಂದ ಮಾತ್ರಕ್ಕೆ ಕ್ರಿಮಿನಲ್ ವಿಚಾರಣೆ ರದ್ದಿಲ್ಲ: ಹೈಕೋರ್ಟ್

Update: 2022-08-28 14:39 GMT
Photo: PTI

ಬೆಂಗಳೂರು, ಆ.28: ಆರೋಪಿಯ ಕರೆಗಳ ವಿವರಗಳ(CDR) ಪ್ರಕಾರ ಆತ ಕೃತ್ಯ ನಡೆದ ಸ್ಥಳದಲ್ಲಿ ಇರಲಿಲ್ಲವೆಂದ ಮಾತ್ರಕ್ಕೆ ಕ್ರಿಮಿನಲ್ ವಿಚಾರಣೆ ರದ್ದುಪಡಿಸಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್(High Court of Karnataka), ಅತ್ಯಾಚಾರ ಕೇಸ್ ರದ್ದುಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದೆ.  

ಆರೋಪಿ ಮನೀಶ್‍ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಘಟನೆ ಸಂಭವಿಸಿದ ದಿನ ಸ್ಥಳದಲ್ಲಿರಲಿಲ್ಲ. ಸಿಡಿಆರ್ ನಿಂದ ದೃಢಪಟ್ಟಿದೆ. ಹೀಗಾಗಿ, ತನ್ನ ವಿರುದ್ಧದ ಪ್ರಕರಣ ರದ್ದುಗೊಳಿಸಬೇಕೆಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. 

ಕರೆ ದಾಖಲೆ ಆಧರಿಸಿ ಪ್ರಕರಣ ರದ್ದುಪಡಿಸಲಾಗದು. ಆರೋಪಿ ಮೇಲೆ ಅತ್ಯಾಚಾರದಂತಹ ಗಂಭೀರ ಆರೋಪ ಇರುವುದರಿಂದ, ಪೂರ್ಣಪ್ರಮಾಣದ ವಿಚಾರಣೆ ಅಗತ್ಯವಿದೆ ಎಂದು ಹೇಳಿರುವ ನ್ಯಾಯಪೀಠ, ಅರ್ಜಿ ವಜಾಗೊಳಿಸಿದೆ. 

ಇದನ್ನೂ ಓದಿ: ಹೈಕೋರ್ಟ್‍ಗೆ ಆ.31ರವರೆಗೆ ರಜೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News