ದೆಹಲಿ ಬಾರ್‌ನಲ್ಲಿ ಮಹಿಳೆಯ ಬಟ್ಟೆ ಹರಿದ ಬೌನ್ಸರ್‌ಗಳು: ಪ್ರಕರಣ ದಾಖಲು

Update: 2022-09-25 02:15 GMT

ಹೊಸದಿಲ್ಲಿ: ಬಾರ್ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದದ ವೇಳೆ ಬಾರ್ ಬೌನ್ಸರ್ ಗಳು ತಮ್ಮ ಮೇಲೆ ಹಾಗೂ ಸ್ನೇಹಿತೆಯರ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದು, ಅನುಚಿತವಾಗಿ ನಡೆದುಕೊಂಡಿದ್ದಾರೆ ಎಂದು ಮಹಿಳೆಯೊಬ್ಬರು ಆಪಾದಿಸಿದ್ದಾರೆ.‌

ಮಹಿಳೆಯನ್ನು ಎಐಐಎಂಎಸ್‍ಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದ್ದು, ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ದೆಹಲಿಯ ದಕ್ಷಿಣ ಬಡಾವಣೆಯಲ್ಲಿ 'ಕೋಡ್' ಹೆಸರಿನ ಬಾರಿಗೆ ಹೋಗುವ ಸಂದರ್ಭದಲ್ಲಿ ಬಾರ್ ಪ್ರವೇಶಕ್ಕೆ ಸಂಬಂಧಿಸಿದಂತೆ ವಾಗ್ವಾದ ನಡೆದಿದೆ. ಈ ವೇಳೆ ಕೋಪಗೊಂಡ ಬೌನ್ಸರ್‌ ಗಳು ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬೌನ್ಸರ್‌ ಗಳು ತಲೆ ಮರೆಸಿಕೊಂಡಿದ್ದಾರೆ.

ತಪಾಸಣೆಗೆ ಆಗಮಿಸಿದ್ದ ಅಬ್ಕಾರಿ ಅಧಿಕಾರಿಗಳನ್ನು ಹಲವು ಗಂಟೆಗಳ ಕಾಲ ಬಾರ್‌ ನಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ ಪ್ರಕರಣದ ಸಂಬಂಧ ಬಾರ್ ಮಾಲಕರ ವಿರುದ್ಧ, ಅವರ ಮಗ ಹಾಗೂ ಸಿಬ್ಬಂದಿ ವಿರುದ್ಧ 2019ರಲ್ಲೇ ಅಬ್ಕಾರಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ. ಈ ಬಗ್ಗೆ ndtv.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News