ಸೀಟು ಭರ್ತಿಗಾಗಿ ವಿದ್ಯಾರ್ಥಿಗಳ ಪರ ಅರ್ಜಿ: ಎರಡು ದಂತ ವೈದ್ಯಕೀಯ ಕಾಲೇಜಿಗಳಿಗೆ ದಂಡ ವಿಧಿಸಿದ ಹೈಕೋರ್ಟ್

Update: 2022-10-09 16:09 GMT
ಸಾಂದರ್ಭಿಕ ಚಿತ್ರ

ಬೆಂಗಳೂರು: ಪ್ರಸಕ್ತ ಸಾಲಿನ(2021-22) ದಂತ ವೈದ್ಯಕೀಯ ಕೋರ್ಸ್‍ಗಳಲ್ಲಿ ಖಾಲಿ ಇರುವ ಸೀಟು ಭರ್ತಿ ಮಾಡುವ ಸಲುವಾಗಿ ವಿದ್ಯಾರ್ಥಿಗಳ ಪರ ಅರ್ಜಿ ಸಲ್ಲಿಸಿ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದ ಎರಡು ಖಾಸಗಿ ದಂತ ವೈದ್ಯಕೀಯ ಕಾಲೇಜುಗಳಿಗೆ ಹೈಕೋರ್ಟ್ ತಲಾ 1ಲಕ್ಷ ರೂ.ದಂಡವನ್ನು ವಿಧಿಸಿದೆ. 

ಬೆಂಗಳೂರಿನ ಶ್ರೀವೆಂಕಟೇಶ್ವರ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೆವಿಜಿ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ಆದೇಶ ನೀಡಿದೆ. 

ಆಯಾ ಕಾಲೇಜುಗಳಲ್ಲಿ ಬ್ಯಾಚುಲರ್ ಆಫ್ ಡೆಂಟಲ್ ಸೈನ್ಸ್(ಬಿಡಿಎಸ್) ಕೋರ್ಸ್‍ಗೆ ಪ್ರವೇಶ ಪಡೆಯದಿದ್ದರೂ 6 ಅರ್ಜಿದಾರ ವಿದ್ಯಾರ್ಥಿಗಳನ್ನು ಕಾಲೇಜುಗಳ ‘ಕೇರ್ ಆಫ್’ಗೆ ಒಳಪಡುತ್ತಾರೆ ಎಂದು ಕಾಲೇಜುಗಳು ತಿಳಿಸಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ನ್ಯಾಯಪೀಠ, ಕಾಲೇಜುಗಳು ‘ಶುದ್ಧ ಹಸ್ತ’ದಿಂದ ಕೋರ್ಟ್ ಮೊರೆ ಹೋಗಿಲ್ಲ ಎಂದಿದೆ. 

ಕಪೋಲಕಲ್ಪಿತ ಅರ್ಜಿ ಸಲ್ಲಿಸುವ ಇತ್ತೀಚಿನ ಪ್ರವೃತ್ತಿಯನ್ನು ಪ್ರಸ್ತಾಪಿಸಿದ ನ್ಯಾಯಾಲಯ ಅಂಥ ಮೊಕದ್ದಮೆಗಳನ್ನು ತೆಗೆದುಹಾಕುವುದು ತನ್ನ ಕರ್ತವ್ಯ ಎಂದಿತು. ಆ ಮೂಲಕ ಅರ್ಜಿ ವಜಾಗೊಳಿಸಿದ ನ್ಯಾಯಾಲಯ ದಂಡದ ಮೊತ್ತವನ್ನು ಬೆಂಗಳೂರಿನ ವಕೀಲರ ಸಂಘಕ್ಕೆ ಪಾವತಿಸುವಂತೆ ಸೂಚಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News