ಹಿಟ್ ಆ್ಯಂಡ್ ರನ್: ಗೃಹರಕ್ಷಕ ಸಿಬ್ಬಂದಿಗೆ ಗಾಯ
Update: 2022-10-12 17:54 GMT
ಉಳ್ಳಾಲ: ಕುತ್ತಾರು ಸಮೀಪ ಬೈಕ್ ನಲ್ಲಿ ತೆರಳುತ್ತಿದ್ದ ಗೃಹ ರಕ್ಷಕ ಸಿಬ್ಬಂದಿಯೋರ್ವರಿಗೆ ಬೈಕೊಂದು ಢಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ಗೃಹ ರಕ್ಷಕ ಸಿಬ್ಬಂದಿಯ ಕಾಲು ಮುರಿತಕ್ಕೊಳಗಾಗಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ.
ಗೃಹ ರಕ್ಷಕ ದಳ ಸಿಬ್ಬಂದಿ ಹಮೀದ್ ಪಾವ್ಲ (52) ಅವರು ಅಪಘಾತದಿಂದ ಕಾಲು ಮುರಿತಕ್ಕೊಳಗಾಗಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರು ಬೈಕಲ್ಲಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ಕುತ್ತಾರಿನಲ್ಲಿ ಬೈಕೊಂದು ಢಿಕ್ಕಿ ಹೊಡೆದು ಪರಾರಿಯಾಗಿದೆ. ಇದರಿಂದ ರಸ್ತೆಗೆಸೆಯಲ್ಪಟ್ಟ ಹಮೀದ್ ಅವರ ಎಡಗಾಲು ಮುರಿದಿದೆ.
ಹಮೀದ್ ಅವರು ಗೃಹರಕ್ಷಕ ಸಿಬ್ಬಂದಿಯಾಗಿದ್ದು ಕಳೆದ ಅನೇಕ ವರುಷಗಳಿಂದ ಟ್ರಾಫಿಕ್ ವಾರ್ಡನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.