ಮಠ ಫಂಡರ್ ಟ್ರಸ್ಟ್ ಉದ್ಘಾಟನೆ
Update: 2025-01-02 14:59 GMT
ಉಪ್ಪಿನಂಗಡಿ: ಮಠ ಫಂಡರ್ ಟ್ರಸ್ಟ್ (ರಿ)ನ ಉದ್ಘಾಟನೆಯು ಹಿರ್ತಡ್ಕದ ದ.ಕ.ಜಿಪಂ ಸರಕಾರಿ ಹಿ.ಪ್ರಾ. ಶಾಲೆಯ ಮೈದಾನದಲ್ಲಿ ಬುಧವಾರ ನಡೆಯಿತು.
ಅಬ್ದುಲ್ ಖಾದರ್ ಮಿಸ್ಬಾಹ್ ದುಆಗೈದರು. ಮುಸ್ತಫಾ ಕೆ.ಪಿ. ಸ್ವಾಗತಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹನೀಫ್ ಟಿ. ಟ್ರಸ್ಟಿನ ಧ್ಯೇಯ ಮತ್ತು ಉದ್ದೇಶಗಳನ್ನು ವಿವರಿಸಿದರು. ಉಪ್ಪಿನಂಗಡಿ ಗ್ರಾಪಂ ಸದಸ್ಯರಾದ ಅಬ್ದುಲ್ ರಹಿಮಾನ್, ರಶೀದ್ ಯು.ಎಂ, ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಝೀರ್ ಮಠ, ನ್ಯಾಯವಾದಿ ಸುಬ್ರಾಯ, ನಾಸಿರ್ ವೈಎನ್‌ಕೆ ಮಾತನಾಡಿದರು.
ವೇದಿಕೆಯಲ್ಲಿ ಮಜೀದ್ ಯು.ಎಂ., ಆದಮ್ ಬಾವ, ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಶಬೀರ್ ಎಂ.ಬಿ. ಮತ್ತಿತರರು ಉಪಸ್ಥಿತರಿದ್ದರು. ಸಫ್ವಾನ್ ಪಿಲಿಕಲ್ ಕಾರ್ಯಕ್ರಮ ನಿರೂಪಿಸಿದರು. ನೌಶಾದ್ ಎಚ್‌ಎನ್ ವಂದಿಸಿದರು.