ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ದ.ಕ. ಜಿಲ್ಲೆಯ 7 ಮಸೀದಿಗಳಿಗೆ ಮೃತದೇಹ ಸಂರಕ್ಷಣಾ ಫ್ರೀಝರ್ ಹಸ್ತಾಂತರ

Update: 2025-01-04 15:37 GMT

ಮಂಗಳೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ದ.ಕ.ಜಿಲ್ಲೆಯ ವಿವಿಧ ಮಸೀದಿಗಳಿಗೆ ಮಂಜೂರಾದ ಮೃತದೇಹ ಸಂರಕ್ಷಣಾ ಫ್ರೀಝರ್ ಬಾಕ್ಸ್‌ಗಳನ್ನು ಶನಿವಾರ ವಿತರಿಸಲಾಯಿತು.

ದ.ಕ.ಜಿಲ್ಲಾ ಕಾರ್ಯಾಲಯದಲ್ಲಿ ಶನಿವಾರ ಕಾರ್ಯಕ್ರಮದಲ್ಲಿ ಫ್ರೀಜರ್‌ಗಳನ್ನು ವಿವಿಧ ಮಸೀದಿಗಳ ಅಧ್ಯಕ್ಷರುಗಳಿಗೆ ಹಸ್ತಾಂತರಿಸಲಾಯಿತು.

ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಡಾ.ಎ.ಕೆ. ಜಮಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ‘ ಅಲ್ಪಸಂಖ್ಯಾತ ಇಲಾಖೆ ಮತ್ತು ವಕ್ಫ್ ಸಮಿತಿ ಸಚಿವ ಝಮೀರ್ ಅಹ್ಮದ್ ಮತ್ತು ರಾಜ್ಯ ವಕ್ಫ್ ಸಮಿತಿ ಅಧ್ಯಕ್ಷ ಅನ್ವರ್ ಬಾಷಾ ಅವರ ಮುತುವರ್ಜಿಯಿಂದಾಗಿ ಮೃತದೇಹಗಳ ಸಂರಕ್ಷಣೆಗೆ ಅಗತ್ಯದ ಫ್ರೀಜರ್ ಬಾಕ್ಸ್‌ಗಳು ಸಿಗುವಂತಾಗಿದೆ. ಇದನ್ನು ಪಡೆದ ಮಸೀದಿಯ ಆಡಳಿತ ಸಮಿತಿಯು ಸದ್ಬಳಕೆ ಮಾಡಬೇಕು’ ಎಂದರು.

ಝೀನತ್ ಬಕ್ಸ್ ಜುಮಾ ಮಸೀದಿ ಬಂದರ್, ಜುಮಾ ಮಸ್ಜಿದ್ ಮತ್ತು ಹಝ್ರತ್ ಸಯ್ಯದ್ ಮುಹಮ್ಮದ್ ಶರೀಫುಲ್ ಮದನಿ ದರ್ಗಾ ಉಳ್ಳಾಲ, ಬದ್ರಿಯಾ ಜುಮಾ ಮಸ್ಜಿದ್ 7ನೇ ಬ್ಲಾಕ್ ಕೃಷ್ಣಾಪುರ, ಮೊಹಿದ್ದೀನ್ ಜುಮಾ ಮಸ್ಜಿದ್ ಗಾಂಧಿ ನಗರ, ರಹ್ಮಾನಿಯಾ ಮಸ್ಜಿದ್ ಮತ್ತು ದರ್ಗಾ ಸಮಿತಿ ಮಲವಂತಿಗೆ ಕಾಜೂರು, ಬದ್ರಿಯಾ ಜುಮಾ ಮಸ್ಜಿದ್ ಮೂಡಬಿದಿರೆ, ಮೊಹಿಯುದ್ದೀನ್ ಜುಮಾ ಮಸ್ಜಿದ್ ಮಿತ್ತಬೈಲ್‌ಗೆ ಫ್ರೀಜರ್‌ಗಳು ಮಂಜೂರಾಗಿದೆ.ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ ಅಬೂಬಕರ್ ಸಿದ್ದೀಕ್, ಸಿರಾಜುದ್ದೀನ್, ಹನೀಫ್ ಮಲ್ಲೂರು, ಸುಳ್ಯ ಜಮಾಅತ್ ಅಧ್ಯಕ್ಷ  ಕೆ ಎಮ್ ಮುಸ್ತಫ , ಮಿತ್ತಬೈಲ್ ಜಮಾಅತ್‌ನ ಅಧ್ಯಕ್ಷ ಮಹಮ್ಮದ್, ಕಿಲ್ಲೂರು ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ಅಜೀಜ್ ರೆಹರಿ ಮಾತನಾಡಿದರು.

ಸುಳ್ಯ ಪಟ್ಟಣ ಪಂಚಾಯತ್ ಸದಸ್ಯ ಉಮರ್, ಮೂಡಬಿದಿರೆ ಜಮಾಅತ್ ಅಧ್ಯಕ್ಷ ಅಬೂಬಕರ್, ಅಝೀಝ್ ಬೈಕಂಪಾಡಿ ಉಪಸ್ಥಿತರಿದ್ದರು.

ಜಿಲ್ಲಾ ವಕ್ಫ್ ಅಧಿಕಾರಿ ಎಂ. ಅಬೂಬಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಸಲಹಾ ಸಮಿತಿ ಸದಸ್ಯರಾದ ಸೈದುದ್ದೀನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಅಭಿನಂದನೆ: ಕರ್ನಾಟಕ ಮಾಧ್ಯಮ ಅಕಾಡೆಮಿಯ 2023ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾಗಿರುವ ವಾರ್ತಾಭಾರತಿ ಮಂಗಳೂರು ಬ್ಯುರೋದ ಹಿರಿಯ ವರದಿಗಾರ ಇಬ್ರಾಹಿಂ ಅಡ್ಕಸ್ಥಳ ಇವರನ್ನು ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ಇದೇ ಸಂದರ್ಭದಲ್ಲಿ ಅಭಿನಂದಿಸಲಾಯಿತು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News