ಪ್ರಥಮ ಕೊಂಕಣಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ

Update: 2025-01-06 16:20 GMT

ಮಂಗಳೂರು: ಜನರು ಮಾತೃಭಾಷೆಗಳನ್ನು ಉಪಯೋಗ ಮಾಡುತ್ತಿಲ್ಲ ಎಂದು ಕೊರಗುವ ಬದಲು ಇಂಗ್ಲಿಷ್ ಕಲಿಯುವ ಅನಿವಾರ್ಯದ ಜೊತೆ ಮಾತೃಭಾಷೆಯ ವಿವಿಧ ಆಕರ್ಷಕ ಕಾರ್ಯಕ್ರಮಗಳವನ್ನು ಆಯೋಜಿಸಿ ಮಾತೃ ಭಾಷೆಯ ಶಬ್ದಗಳನ್ನು ಕಲಿಕೆಯೊಂದಿಗೆ ಉಪಯೋಗಿಸುವ ಹಾಗೆ ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಫಾ ಪ್ರವೀಣ್ ಮಾರ್ಟಿಸ್ ಹೇಳಿದರು.

ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇದರ ಐವತ್ತೊಂದನೆಯ ಸ್ಥಾಪನಾ ದಿನದ ಪ್ರಯುಕ್ತ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಮತ್ತು ಕೊಂಕಣಿ ಸಂಸ್ಥೆಯ ಜೊತೆ ಶನಿವಾರ ನಡೆದ ಪ್ರಥಮ ಕೊಂಕಣಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ಗುಮಟ್ ಬಡಿದು ತೋಣಿ ಹೊಡೆದು ಉದ್ಘಾಟಿಸಿ ಅವರು ಮಾತನಾಡಿದರು.

ಗೋವಾ ಅಕಾಡಮಿಯ ಕಾರ್ಯನಿರ್ವಾಹಕ ಅಧ್ಯಕ್ಷ ವಸಂತ ಭಾಗವತ್ ಸಾವಂತ್, ಅಕಾಡಮಿಯ ಸಂಶೋಧನಾ ಸಹಾಯಕ ದತ್ತರಾಜ ನಾಯ್ಕ, ಕಾರ್ಯದರ್ಶಿ ಪರಾಗ್ ನಗರ್‌ಸೇಕರ್‌ರನ್ನು ಸನ್ಮಾನಿಸಲಾಯಿತು.

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಡಾ. ರೊನಾಲ್ಡ್ ನಜ್ರೆತ್ ಮಾತನಾಡಿ ಕೊಂಕಣಿ ಉನ್ನತ ಶಿಕ್ಷಣಕ್ಕಾಗಿ ಕಾಲೇಜು ಅವಕಾಶಗಳನ್ನು ಕೊಡಲಿದೆ ಎಂದರು. ಕೆಬಿಎಮ್‌ಕೆ ಅಧ್ಯಕ್ಷ ಕೆ. ವಸಂತ ರಾವ್ ಮಾತನಾಡಿದರು. ವಿದ್ಯಾರ್ಥಿಗಳಾದ ಜೀತನ್ ಡಿಸೋಜ, ಪ್ರಫುಲ್ಲಾ ನೊರೊನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸಂಚಾಲಕ, ಕೊಂಕಣಿ ಭಾಷಾ ಮಂಡಲ ಕರ್ನಾಟಕದ ಕಾರ್ಯದರ್ಶಿ ರೇಮಂಡ್ ಡಿಕೂನಾ ತಾಕೊಡೆ ಸ್ವಾಗತಿಸಿದರು. ಸಂಯೋಜಕಿ ಡೊಸೆವ್ರಿನ್ ಪಿಂಟೊ ವಂದಿಸಿದರು. ಕೊಂಕಣಿ ವಿಭಾಗದ ಮುಖ್ಯಸ್ಥೆ ಪ್ಲೊರಾ ಕಾಸ್ತೆಲಿನೊ ಸಹಕರಿಸಿದರು. ವಿದ್ಯಾರ್ಥಿ ಕ್ಲೆವಿಟಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿ ಫಾ. ಮೆಲ್ವಿನ್ ಡಿಕುನ್ಹಾ ವಹಿಸಿದ್ದರು. ಅಲೋಶಿಯಸ್ ಕಾಲೇಜಿನಲ್ಲಿ ಮೂವತ್ತು ವರ್ಷಗಳ ಮೊದಲು ಕೊಂಕಣಿ ವಿಭಾಗ ಆರಂಭಿಸಿದ ಫಾ ಪ್ರಶಾಂತ ಮಾಡ್ತ ಅವರನ್ನು ಸನ್ಮಾನಿಸಲಾಯಿತು. ಸಂತ ಅಲೋಶಿಯಸ್ ಕಾಲೇಜಿನ ರಿಜಿಸ್ಟ್ರಾರ್ ಡಾ. ರೊಟೇರಿಯನ್ ಆಲ್ವಿನ್ ಡೆಸಾ ಸಮಾರೋಪ ಭಾಷಣಗೈದರು.

ಗೋವಾದ ಎಂಇಎಸ್ ಕಾಲೇಜಿನ ಪ್ರಾಧ್ಯಾಪಕ ಸತ್ಯವಾನ್ ನಾಯ್ಕ್, ವಿದ್ಯಾರ್ಥಿಗಳಾದ ಜೀತನ್ ಮತ್ತು ನೊಯೆಲ್ ಸಾಂತುಮಾಯೊರ್ ಹಾಗೂ ಜೊಶ್ವಾ ಸಮ್ಮೇಳನದ ಅನುಭವ ಹಂಚಿಕೊಂಡರು. ವಿದ್ಯಾರ್ಥಿಗಳಾದ ಪ್ರಪುಲ್ಲ ವಂದಿಸಿದರು. ಇಶಿತ ಬೆನ್ನಿಸ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News