ವಿಟ್ಲ| ಈಡಿ ಅಧಿಕಾರಿಗಳ ಸೋಗಿನಲ್ಲಿ ಹಣ ದೋಚಿದ ಪ್ರಕರಣ: ಮನೆಯವರ ಮೊಬೈಲ್ ಪತ್ತೆ

Update: 2025-01-07 15:50 GMT

ವಿಟ್ಲ: ಬೋಳಂತೂರು ಸಮೀಪದ ನಾರ್ಶ ನಿವಾಸಿ, ಉದ್ಯಮಿ ಸುಲೈಮಾನ್ ಹಾಜಿ ಅವರ ಮನೆಯಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಸೋಗಿನಲ್ಲಿ ದರೋಡೆ ನಡೆಸಿದ ಸಂದರ್ಭ ಮನೆಯರಿಂದ ಕಸಿದುಕೊಂಡ ಮೊಬೈಲ್ ಗಳು ಮನೆಯಲ್ಲೇ ಪತ್ತೆಯಾಗಿವೆ.

ಪೊಲೀಸ್ ಅಧಿಕಾರಿಗಳ ತಂಡ ಮಾಹಿತಿಗಳನ್ನು ಪಡೆದುಕೊಂಡು ತನಿಖೆ ಮುಂದುವರಿಸಿದೆ.

ದರೋಡೆಕೋರರು ಮನೆಯನ್ನು ಪ್ರವೇಶಿಸುತ್ತಿದ್ದಂತೆ ಮನೆಯವರಲ್ಲಿದ್ದ 5 ಮೊಬೈಲ್ ಅನ್ನು ತಮ್ಮ ವಶಕ್ಕೆ ಪಡೆದು ಕೊಂಡಿದ್ದರು. ಅವರು ಹಿಂದಿರುಗುವ ಸಂದರ್ಭ ಇದನ್ನು ಅವರ ಜತೆಯಲ್ಲೇ ತೆಗೆದುಕೊಂಡು ಹೋಗಿದ್ದರೆಂದು ಹೇಳಲಾಗಿತ್ತು. ಆದರೆ ಮೊಬೈಲ್ ಗಳಿಂದ ಸಿಮ್ ತೆಗೆದು ಮನೆಯ ಮೂರನೇ ಮಹಡಿಯಲ್ಲಿ ಎಸೆದು ಹೋಗಿರುವುದು ಬೆಳಕಿಗೆ ಬಂದಿದೆ. ಸಿಮ್ ಗಳನ್ನು ತುಂಡರಿಸಿ ಅಲ್ಲೇ ಎಸೆದಿದ್ದಾರೆ ಎಂದು ತಿಳಿದುಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News