ಬೊಂಡಂತಿಲ ವಾರ್ಡ್: ನೂತನ ಕಾಂಕ್ರೀಟ್ ರಸ್ತೆ ಉದ್ಘಾಟನೆ

Update: 2025-01-06 16:29 GMT

ಮಂಗಳೂರು: ನೀರುಮಾರ್ಗ ಗ್ರಾಪಂ ವ್ಯಾಪ್ತಿಯ ಬೊಂಡಂತಿಲ ಗ್ರಾಮದ 4ನೇ ವಾರ್ಡ್‌ನ ನಿರಾಲ ಕೃಪಾಧಾಮದಲ್ಲಿ 5 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಲಾದ ನೂತನ ಕಾಂಕ್ರೀಟ್ ರಸ್ತೆಯನ್ನು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಜಂಟಿಯಾಗಿ ಉದ್ಘಾಟಿಸಿದರು.

ಜಿಪಂ ಮಾಜಿ ಸದಸ್ಯ ಹಾಗೂ ಕೆಡಿಪಿ ಸದಸ್ಯ ಮೆಲ್ವಿನ್ ಡಿಸೋಜ ಮುಂದಾಳತ್ವದಲ್ಲಿ ನಿರಾಲ ಕೃಪಾಧಾಮ ನಾಗರಿಕರ ಪರವಾಗಿ ಐವನ್ ಡಿ’ಸೋಜ, ಇನಾಯತ್ ಅಲಿ ಅವರನ್ನು ಸನ್ಮಾನಿಸಲಾಯಿತು.

ಧಾರ್ಮಿಕ ದತ್ತಿ ಪರಿಷತ್ತಿನ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ನೀರುಮಾರ್ಗ ಗ್ರಾಪಂ ಅಧ್ಯಕ್ಷ ಶ್ರೀಧರ್, ಸದಸ್ಯರಾದ ಗಾಡ್ವಿನ್ ಡಿಸೋಜ, ರೋಹಿತ್ ಪೂಜಾರಿ, ನಮಿತಾ, ಕೀರ್ತಿರಾಜ್, ವಾಮಂಜೂರು ಚರ್ಚ್‌ನ ಕ್ಯಾಥೋಲಿಕ್ ಸಭಾದ ಅಧ್ಯಕ್ಷ ಸಂತೋಷ್ ಸಲ್ಡಾನ, ನೀರುಮಾರ್ಗ ಗ್ರಾಪಂ ಮಾಜಿ ಅಧ್ಯಕ್ಷ ಯಶೋಧಾ, ಸ್ಥಳೀಯ ಸ್ತ್ರೀ ಶಕ್ತಿ ಗುಂಪಿನ ಅಧ್ಯಕ್ಷೆಯರಾದ ಸರೋಜಾ, ವೀಣಾ, ಬೇಬಿ, ಸೆಬೆಸ್ಟಿನ್ ರೋಡ್ರಿಗಸ್, ಜೋಸೆಫ್ ಸೋನು, ರಮೇಶ್ ಸಾಲ್ಯಾನ್, ವಿನೋದ್ ರೇಗೊ, ಆಲ್ವಿನ್ ಅಲ್ಬುಕರ್ಕ್, ಭಾಗೀರಥಿ, ಡೇವಿಡ್, ಆಲ್ವಿನ್, ಯಶವಂತ ಶೆಟ್ಟಿ ಗುರುಪುರ, ವಿನಯ್ ಕುಮಾರ್ ಶೆಟ್ಟಿ ಗುರುಪುರ, ತಿರುವೈಲು ವಾರ್ಡ್‌ನ ಯೂತ್ ಕಾಂಗ್ರೆಸ್ ಅಧ್ಯಕ್ಷ ಹೆರ್ವಿನ್ ಪಿಂಟೊ, ಬೊಂಡಂತಿಲ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಶಾಲ್, ಹರೀಶ್ ಭಂಡಾರಿ ಬಂಗ್ಲೆಗುಡ್ಡೆ, ಮರಿಯಾ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕಿ ಲವಿಟಾ ಡಿಸಿಲ್ವ ಕಾರ್ಯಕ್ರಮ ನಿರೂಪಿಸಿದರು. ಆಶಾ ಕಾರ್ಯಕರ್ತೆ ಬೇಬಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News