ಧರ್ಮಸ್ಥಳ| ಭಕ್ತರಿಗೆ ಸುಸಜ್ಜಿತವಾದ ಸರತಿ ಸಾಲಿನ ನೋಂದಣಿ ವ್ಯವಸ್ಥೆ: ಡಾ. ವೀರೇಂದ್ರ ಹೆಗ್ಗಡೆ
ಧರ್ಮಸ್ಥಳ: ವಿವಿಧ ಪ್ರದೇಶದಿಂದ ಆಗಮಿಸುವ ಜನರು ಸಾಕಷ್ಟು ಹೊತ್ತು ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಕಾಯು ತ್ತಾರೆ. ಭಕ್ತರಿಗೆ ಆಗುತ್ತಿರುವ ಈ ತೊಂದರೆಯನ್ನು ತಪ್ಪಿಸಲು ಸುಸಜ್ಜಿ ತವಾದ ಸರತಿ ಸಾಲಿನ ನೋಂದಣಿ ವ್ಯವಸ್ಥೆ ಮತ್ತು ಆರಾಮವಾಗಿ ಕುಳಿತುಕೊಳ್ಳಲು ವ್ಯವಸ್ಥೆ ಇರುವ ಸುಸಜ್ಜಿತ ಕಟ್ಟಡ ನಿರ್ಮಿಸಬೇಕೆನ್ನುವುದು ಹಲವು ವರ್ಷಗಳ ಹಿಂದಿನ ನಿರೀಕ್ಷಿತ ಯೋಜನೆ ಇದೀಗ ಪೂರ್ಣಗೊಂಡು ಉಪರಾಷ್ಟ್ರಪತಿ ಜಗದೀಪ್ ಧನಕರ್ ಉದ್ಘಾಟಿಸಲಿದ್ದಾರೆ. ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾಧಿಗಳು ಈ ವ್ಯವಸ್ಥೆಯನ್ನು ಉಪಯೋಗಿಸುವಂತೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಭಾರತದ ಉಪರಾಷ್ಟ್ರ ಪತಿ ಜಗದೀಪ್ ಧನ್ಕರ್ ಅವರು ಮಂಗಳವಾರ ಶ್ರೀ ಕ್ಷೇತ್ರದ ನೂತನ ಸೌಲಭ್ಯಗಳನ್ನು ಒಳ ಗೊಂಡ ಸರತಿ ಸಾಲಿನ ಕಟ್ಟಡ ಸಂಕೀರ್ಣ ಶ್ರೀ ಸಾನ್ನಿಧ್ಯ ಇದರ ಉದ್ಘಾಟನೆ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ 2024- 25ರ ಜ್ಞಾನದೀಪ ಕಾರ್ಯಕ್ರಮದ ಉದ್ಘಾಟನೆಯ ತಯಾರಿಯ ಸಂದರ್ಭ ಸೋಮವಾರ ಸುದ್ದಿಗಾರ ರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಈ ರೀತಿಯ ಸುಸಜ್ಜಿತ ಸಂಕೀರ್ಣ ನಿರ್ಮಿ ಸಲು ಕಳೆದ 15 ವರ್ಷದಿಂದ ಯೋಜಿಸಿ 11 ವಿವಿಧ ಯೋಜನೆ ರೂಪಿಸಿ ಅಂತಿಮವಾಗಿ ರೂಪಿಸಿದ ಸಾನಿಧ್ಯ ಸಂಕೀರ್ಣ ಸುಸಜ್ಜಿತ ವಾಗಿ ರೂಪಿಸಲಾಗಿದೆ.ಇದರಲ್ಲಿ ವ್ಯವಸ್ಥಿ ತವಾಗಿ ನೋಂದಣಿ, ಸೂಕ್ತ ಮಾಹಿತಿ ನೀಡುವ ವ್ಯವಸ್ಥೆ, ಕುಳಿತು ಕೊಳ್ಳಲು ವ್ಯವಸ್ಥೆ, ಇದರಿಂದ ಭಕ್ರರು ಸಮಾಧಾನ ಚಿತ್ತ ರಾಗಿ ಕುಳಿತು ದೇವರ ದರ್ಶನ ಮಾಡಬಹುದಾಗಿದೆ. ಈ ವ್ಯವಸ್ಥೆ ಉಪಯೋಗ ಭಕ್ತಾದಿಗಳಿಗೆ ಲಭಿಸಲಿದೆ ಎಂದು ಹೆಗ್ಗಡೆ ವಿವರಿಸಿದರು.
*ಬಿಗಿ ಬಂದೋಬಸ್ತು;-ಉಪರಾಷ್ಟ್ರಪತಿ ಜಗದೀಪ್ ಧನ್ ಕರ್ ಆಗಮಿಸುವ ಹಿನ್ನೆಲೆಯಲ್ಲಿ ಪಶ್ಚಿಮ ವಲಯ ಪೋಲಿಸ್ ವಲಯದ ಸುಮಾರು ಒಂದು ಸಾವಿರಕ್ಕೂ ಅಧಿಕ ಪೋಲಿಸರನ್ನು ನಿಯೋಜಿಸಲಾಗಿದೆ.