ನಿಟ್ಟೆ: ಡಾ. ಕೆ ಆರ್ ಶೆಟ್ಟಿ ನೆನಪು ಕಾರ್ಯಕ್ರಮ
ಕೊಣಾಜೆ: ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಡಾ. ಕೆ.ಆರ್ ಶೆಟ್ಟಿ ತುಳು ಅಧ್ಯಯನ ಕೇಂದ್ರ ಹಾಗೂ ಸೆಂಟರ್ ಫಾರ್ ಅಡ್ವಾನ್ಸಡ್ ನ್ಯೂರೊಲಾಜಿಕಲ್ ರಿಸರ್ಚ್ ಸಹಯೋಗದಲ್ಲಿ ಡಾ.ಕೆ.ಆರ್.ಶೆಟ್ಟಿ ನೆನಪು ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಸಮಾತಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಹ ಕುಲಾಧಿಪತಿ ಪ್ರೊ. ಡಾ.ಎಂ ಶಾಂತಾರಾಮ್ ಶೆಟ್ಟಿ ಅವರು, ಡಾ ಕೆ ಆರ್ ಶೆಟ್ಟಿ ಸೇವೆಗಾಗಿಯೇ ತನ್ನ ಜೀವನವನ್ನು ಮುಡಿಪಾಗಿಟ್ಟುಕೊಂಡವರು ಎಂದ ಅವರು, ವೈದ್ಯರಿಗೆ ಮುಖ್ಯವಾ ಗಿರುವ ನೀತಿಸಂಹಿತೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡು ವೃತ್ತಿನಿಷ್ಥರಾಗಿದ್ದ ಡಾ.ಕೆ.ಆರ್.ಶೆಟ್ಟಿಯವರನ್ನು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜಿನ ಮಾಜಿ ಡೀನ್, ಪ್ರೊ. ಡಾ.ಬಿ ಸಂಜೀವ ರೈ. ತಾವು ಡಾ ಕೆ.ಆರ್ ಶೆಟ್ಟಿಯವರೊಂದಿಗೆ ಕಳೆದ ಅಮೂಲ್ಯ ದಿನಗಳನ್ನು ಮೆಲುಕು ಹಾಕಿದರು.
ಕಾರ್ಯಕ್ರಮದ ಅತಿಥಿಗಳಾದ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಡಾ.ಎಂ.ಎಸ್.ಮೂಡಿತ್ತಾಯ ಅವರು ಮಾತನಾಡಿದರು. ನಿಟ್ಟೆ ವಿಶ್ವವಿದ್ಯಾನಿಲಯದ ನಿಕಟಪೂರ್ವ ಕುಲಪತಿ ಪ್ರೊ. ಸತೀಶ್ ಕುಮಾರ್ ಭಂಡಾರಿ, ಡಾ. ಕೆ.ಆರ್. ಶೆಟ್ಟಿಯವರ ಪತ್ನಿ, ಸೊಸೆ, ಮೊಮ್ಮಗಳು ಮತ್ತಿತರ ಬಂಧುಗಳು ಉಪಸ್ಥಿತರಿದ್ದರು.
ಸಿ.ಎ ಎಸ್.ಆರ್ ನಿರ್ದೇಶಕರಾದ ಪ್ರೊ. ಲೇಖಾ ಪಂಡಿತ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಸಂಯೋಜಕರಾದ ಡಾ ಕೆ. ಆರ್ ಶೆಟ್ಟಿ ತುಳು ಅಧ್ಯಯನ ಕೇಂದ್ರದ ಸಂಯೋಜಕರೂ ಆಗಿರುವ ಡಾ. ಸಾಯಿಗೀತಾ ಅವರು ಕಾರ್ಯಕ್ರಮ ನಿರೂಪಿಸಿದರು.