ಮಂಗಳೂರು - ಪುಣೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಹಾರಾಟ ಆರಂಭ
ಮಂಗಳೂರು: ಮಹಾರಾಷ್ಟ್ರದ ಪುಣೆಗೆ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜ.4ರಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ನೇರ ಹಾರಾಟವನ್ನು ಆರಂಭಿಸಿದೆ.
ವಾರದ ಪ್ರತಿ ಶನಿವಾರ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಎರಡು ವಿಮಾನಗಳು ಮಂಗಳೂರು ಮತ್ತು ಪುಣೆ ನಡುವೆ ಹಾರಾಟ ನಡೆಸಲಿವೆ.
ಏರ್ ಇಂಡಿಯಾ ಎಕ್ಸ್‌ಪ್ರೆಸ್ (ನಂ.2256) ಉದ್ಘಾಟನಾ ವಿಮಾನವು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಎಂಐಎ) ಬೆಳಗ್ಗೆ 8 ಗಂಟೆಗೆ ಹೊರಟಿತು. 9:25ಕ್ಕೆ ಪುಣೆ ವಿಮಾನ ನಿಲ್ದಾಣಕ್ಕೆ ತಲುಪಿದೆ. ವಿಮಾನ ನಂ.2257 ಪುಣೆಯಿಂದ ಬೆಳಗ್ಗೆ 9:55ಕ್ಕೆ ಹೊರಟು 11:45 ಕ್ಕೆ ಮಂಗಳೂರಿಗೆ ಬಂದಿಳಿಯಿತು. ಕ್ಯಾಪ್ಟನ್ ಅಸತ್ಕರ್ ದೀಪಕ್ ದೌಲತ್ ವಿಮಾನದ ಕಮಾಂಡರ್ ಆಗಿದ್ದರು.ಸಹ ಪೈಲಟ್ ಮತ್ತು ನಾಲ್ಕು ಮಂದಿ ಸಿಬ್ಬಂದಿ ಉದ್ಘಾಟನಾ ವಿಮಾನದಲ್ಲಿ ತೆರಳಿದರು.
ಶನಿವಾರ ರಾತ್ರಿ ವಿಮಾನ 2236 ಮಂಗಳೂರಿನಿಂದ ಸಂಜೆ 6:30ಕ್ಕೆ ಹೊರಟು ರಾತ್ರಿ 8 ಗಂಟೆಗೆ ಪುಣೆಗೆ ಆಗಮಿಸುತ್ತದೆ. ಹಿಂದಿರುಗುವ ವಿಮಾನ ವಿಮಾನ 2237 ಪುಣೆಯಿಂದ ರಾತ್ರಿ 8:35 ಕ್ಕೆ ಹೊರಟು ರಾತ್ರಿ 10:05 ಕ್ಕೆ ಮಂಗಳೂರನ್ನು ತಲುಪುತ್ತದೆ.
ಎರಡು ಹೊಸ ವಿಮಾನಗಳು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವು ಪ್ರಯಾಣಿಕರಿಗೆ ತಡೆರಹಿತ ಸಂಪರ್ಕವನ್ನು ಒದಗಿಸಲು ಒತ್ತು ನೀಡಲಿದೆ ಎಂದು ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.