ಕುಕ್ಕಾಜೆ ಎಂಜೆಎಂ ಆಡಳಿತ ಸಮಿತಿಗೆ ಚುನಾವಣೆ
Update: 2025-01-02 14:54 GMT
ಮಂಗಳೂರು, ಜ.2: ಮಂಚಿ ಗ್ರಾಮದ ಕುಕ್ಕಾಜೆಯ ಮೊಹಿಯ್ಯುದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿಯ 11 ಮಂದಿಯ ಸದಸ್ಯರ ಆಯ್ಕೆಗೆ ಚುನಾವಣೆ ನಡೆಸಲು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪೂರ್ಣಿಮಾ ಬಿ. ಚೂರಿ ಅವರನ್ನು ವಕ್ಫ್ ಮಂಡಳಿ ನೇಮಿಸಿದೆ.
ಜ.3ರಿಂದ 9ರವರೆಗೆ ಪೂ.11ರಿಂದ ಮಧ್ಯಾಹ್ನ 2ರೊಳಗೆ ನಗರದ ಪಾಂಡೇಶ್ವರದ ಓಲ್ಡ್ ಕೆಂಟ್ ರಸ್ತೆಯ ಮೌಲಾನಾ ಆಝಾದ್ ಭವನದಲ್ಲಿರುವ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಯ ಕಚೇರಿಗೆ ನಾಮಪತ್ರ ಸಲ್ಲಿಸಬೇಕು. ನಾಮಪತ್ರ ಸಲ್ಲಿಸಲು ಜ.10 ಮತ್ತು ನಾಮಪತ್ರ ವಾಪಸ್ ಪಡೆಯಲು ಜ.13 ಕೊನೆಯ ದಿನಾಂಕವಾಗಿದೆ. ಮತದಾನ ಅವಶ್ಯವಿದ್ದರೆ ಜ.25ರಂದು ಮಸೀದಿಯ ಆವರಣದಲ್ಲಿ ನಡೆಸಲಾಗುವುದು. ಜ.25ರಂದು ಮತದಾನ ನಡೆದ ಸ್ಥಳದಲ್ಲೇ ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.