ಜೂಜಾಟದ ಅಡ್ಡೆಗೆ ದಾಳಿ: 7 ಮಂದಿ ಸೆರೆ
ಮಂಗಳೂರು, ಜ.2: ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜನಕಟ್ಟೆಯ ಆರಂತಬೆಟ್ಟು ಎಂಬಲ್ಲಿನ ಜೂಜಾಟದ ಅಡ್ಡೆಗೆ ಮಂಗಳೂರು ಸಿಸಿಬಿ ಪೊಲೀಸರು ಗುರುವಾರ ದಾಳಿ ನಡೆಸಿ 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪುತ್ತಿಗೆಪದವು ನಿವಾಸಿ ಶರೀಫ್(52), ಮೂಡಲ್ ಬಂಡಸಾಲೆ ನಿವಾಸಿ ಸತೀಶ್ ಶೆಟ್ಟಿ (46), ಕಾಂತಾವರದ ಜೀವಂದರ್ (48), ಸಾಣೂರಿನ ಸುನಿಲ್ ಕುಮಾರ್(43), ಆರಂತಬೆಟ್ಟು ನಿವಾಸಿ ಜಗದೀಶ್ ಆಚಾರ್ಯ(43), ಗುಡ್ಡೆಯಂಗಡಿಯ ಮನೋಹರ ಸಾಲ್ಯಾನ್ (56), ತೋಡಾರ್ ನಿವಾಸಿ ಜಯರಾಮ ಶೆಟ್ಟಿ(53) ಎಂಬವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿದ್ದ ನಗದು ಹಣ ರೂ. 56,170, ಮೊಬೈಲ್ ಫೋನುಗಳು 8, ಕಾರು-1, ಬೈಕ್ ಗಳು 6, ಆಟೋರಿಕ್ಷಾ-1 ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 9,23,000 ರೂ. ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕ್, ಪೊಲೀಸ್ ನಿರೀಕ್ಷಕ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್‌ಐ ಸುದೀಪ್ ಎಂ ವಿ, ಎಎಸ್‌ಐ ಸುಜನ್ ಶೆಟ್ಟಿ ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.