ನಂದಾವರ ತಾಜುಲ್ ಉಲಮಾ ಕಲ್ಚರಲ್ ಸೆಂಟರ್ ನಲ್ಲಿ ಮೌಲಿದುನ್ನಬಿ

Update: 2022-10-14 05:06 GMT

ಬಿ.ಸಿ.ರೋಡ್, ಅ.14: ಎಸ್‌ವೈಎಸ್, ಎಸ್ಸೆಸ್ಸೆಫ್, ತಾಜುಲ್ ಉಲಮಾ ಕಲ್ಚರಲ್ ಸೆಂಟರ್ ಹಾಗೂ ಜಂಇಯ್ಯತುದ‌ಅ್‌ವತಿಸುನ್ನಿಯಾ ಗಳ ಆಶ್ರಯದಲ್ಲಿ  ಮರ್ಹಬಾ ಯಾ ಶಹ್‌ರ ರಬೀ‌ಅ್ ಎಂಬ ಘೋಷವಾಕ್ಯದೊಂದಿಗೆ ತಾಜುಲ್ ಉಲಮಾ ಕಲ್ಚರಲ್ ಸೆಂಟರ್ ನ ವಠಾರದಲ್ಲಿ ಮೌಲಿದುನ್ನಬಿ ಕಾರ್ಯಕ್ರಮ ನಡೆಯಿತು.

ಸೈಯದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ದುಆಗೈದರು. ನಂದಾವರ ಜಂಇಯ್ಯತುದ‌ಅ್‌ವತಿಸುನ್ನಿಯಾದ ಅಧ್ಯಕ್ಷ ಸುಲೈಮಾನ್ ಮದನಿ ಉದ್ಘಾಟಿಸಿದರು. ತಾಜುಲ್ ಉಲಮಾ ಕಲ್ಚರಲ್ ಸೆಂಟರ್ ಅಧ್ಯಕ್ಷ ಎನ್.ವಿ.ಇಸ್ಹಾಕ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು.

ಆಲಡ್ಕ ಎಂಜೆಎಂ ಮುದರ್ರಿಸ್ ಬಿ.ಎಚ್.ಅಬೂಸ್ವಾಲಿಹ್ ಉಸ್ತಾದ್, ಬಿಜೆಎಂ ಮುದರ್ರಿಸ್ ಅಶ್ರಫ್ ಸಖಾಫಿ ಮೌಲಿದ್ ಮಜ್ಲಿಸ್ ಗೆ ನೇತೃತ್ವ ವಹಿಸಿದರು. ಫಾಮಿದ್ ಹನೀಫಿ ಅಲ್-ಅಶ್ಹರಿ ತಂಡದವರಿಂದ ಬುರ್ದಾ ಏರ್ಪಡಿಸಲಾಗಿತ್ತು.  

ವೇದಿಕೆಯಲ್ಲಿ ಅಬ್ಬೋನಾಕ ಕೋಟೆ, ಅಬ್ದುರ್ರಹ್ಮಾನ್ ಮದನಿ, ರಫೀಕ್ ಕಿಸ್ವ ಮಾಲಿಕ್ ಉಸ್ಮಾನ್, ಮುಹಮ್ಮದ್ ಶರೀಫ್, ಇಸ್ಮಾಯೀಲ್ ಕೋಟೆ, ನಝೀರ್ ಮುಸ್ಲಿಯಾರ್ ಜಿ.ಟಿ.ರೋಡ್, ಜಿ.ಎಂ.ಮುಹಮ್ಮದ್, ಫಾರೂಕ್ ಕೋಟೆ, ಇಕ್ಬಾಲ್ ಆಝಾದ್, ಅಬ್ದುಲ್ ಹಮೀದ್ ದಾಸರಗುಡ್ಡೆ ಮತ್ತು ಶರ್ವಾನ್ ಸಅದಿ ಉಪಸ್ಥಿತರಿದ್ದರು.

ಎಸ್‌ವೈಎಸ್ ನಂದಾವರ ಘಟಕದ ಅಧ್ಯಕ್ಷ ಎನ್.ಎಂ.ಹಸನ್ ಮದನಿ ಸ್ವಾಗತಿಸಿದರು. ಎಸ್ಸೆಸ್ಸೆಫ್ ನಂದಾವರ ಶಾಖಾಧ್ಯಕ್ಷ ನಾಸಿರ್ ಅಹ್ಸನಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News