ಕಸಾಪ ದತ್ತಿ ಪ್ರಶಸ್ತಿ ಪ್ರಕಟ, ನಾಳೆ ಪ್ರಶಸ್ತಿ ಪ್ರದಾನ

Update: 2022-10-20 00:09 IST

ಬೆಂಗಳೂರು, ಅ. 19: ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನೀಡುವ ‘ಚಾವುಂಡರಾಯ ದತ್ತಿ', ‘ನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತಿರ್ಥಹಳ್ಳಿ ದತ್ತಿ'ಹಾಗೂ ‘ಕನ್ನಡ ಕಾಯಕ ದತ್ತಿ'ಪ್ರಶಸ್ತಿಪ್ರಕಟವಾಗಿದ್ದು, ಅ.21ರಂದು ಪ್ರಶಸ್ತಿ ಪ್ರದಾನಮಾಡಲಾಗುವುದು ಎಂದುಪ್ರಕಟನೆ ತಿಳಿಸಿದೆ. 

ಧಾರವಾಡ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಶಾಂತಿನಾಥ ದಿಬ್ಬದ ಅವರು ‘ಚಾವುಂಡರಾಯ ದತ್ತಿ'ಪ್ರಶಸ್ತಿಗೆ, ಪತ್ರಕರ್ತ ಕೆ.ಎನ್.ಚನ್ನೇಗೌಡ ಅವರು ‘ನಾಗಡಿಕೆರೆ ಕಿಟ್ಟಪ್ಪಗೌಡ ರುಕ್ಮಿಣಿ ತಿರ್ಥಹಳ್ಳಿ ದತ್ತಿ'ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ‘ಕನ್ನಡ ಕಾಯಕ ದತ್ತಿ'ಪ್ರಶಸ್ತಿಗೆನಿರಂಜನಪ್ರಣವಸ್ವರೂಪಿ ಬಸವಲಿಂಗ ಮಹಾಸ್ವಾಮಿಗಳು, ಸಹಾಯಕ ಪ್ರಾಧ್ಯಾಪಕ ಡಾ. ಶಂಕರಪ್ಪ ಮತ್ತು ರಂಗಭೂಮಿ ಕಲಾವಿದ ಕೆ. ಇಮಾಮ ಸಾಬ ಆಯ್ಕೆ ಆಗಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ವಿದ್ವಾಂಸರಾದ ನಾಡೋಜ ಡಾ. ಹಂಪ ನಾಗರಾಜಯ್ಯ ಅವರು ನೆರವೇರಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ವಹಿಸಲಿದ್ದಾರೆ. ಮಾಜಿ ಲೋಕಾಯುಕ್ತ ಸಂತೋಷ ಹೆಗ್ಡೆ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News