'ಹಲಾಲ್ ಮುಕ್ತ' ಅಭಿಯಾನ ಕಾನೂನು ಮೀರಿದರೆ ಕಠಿಣ ಕ್ರಮ: ಎಡಿಜಿಪಿ ಅಲೋಕ್ ಕುಮಾರ್ ಎಚ್ಚರಿಕೆ
Update: 2022-10-20 13:42 GMT
ಹಾಸನ: ಹಿಂದುತ್ವ ಸಂಘಟನೆಗಳು ಹಲಾಲ್ ಮುಕ್ತ ದೀಪಾವಳಿ ಆಚರಣೆ ಅಭಿಯಾನ ಆರಂಭಿಸಿದ್ದು, 'ಅಭಿಯಾನದ ಹೆಸರಿನಲ್ಲಿ ಕಾನೂನು ಮೀರಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಎಡಿಜಿಪಿ ಅಲೋಕ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಹಾಸನಾಂಬೆ ದರ್ಶನ ಪಡೆದ ಬಳಿಕ ಮಾತನಾಡಿದ ಅವರು, ''ಕಾನೂನು ಇತಿಮಿತಿಯಲ್ಲಿ ಯಾರು ಪ್ರತಿಭಟನೆ ಮಾಡುತ್ತಾರೋ, ಅದಕ್ಕೆ ನಮ್ಮ ಕಡೆಯಿಂದ ಸಮಸ್ಯೆಯಿಲ್ಲ. ಆದರೆ ಕಾನೂನು ಮೀರಿ ಯಾರೇ ಆಗಲಿ, ಏನಾದರೂ ಮಾಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ'' ಎಂದರು.
ಈ ಬಗ್ಗೆ ರಾಜ್ಯದ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡುವುದಾಗಿ ಇದೇ ವೇಳೆ ತಿಳಿಸಿದರು.