ವಿರಾಜಪೇಟೆ: ಅನ್ವಾರುಲ್ ಹುದಾ ವತಿಯಿಂದ ಮೀಲಾದ್ ಸಂದೇಶ ಜಾಥಾ

Update: 2022-10-23 11:17 GMT

ವಿರಾಜಪೇಟೆ: ಅನ್ವಾರುಲ್ ಹುದಾ ವಿದ್ಯಾಸಂಸ್ಥೆ ಹಾಗೂ SSF, SYS, KMJ, SJM, SBS, ಸುನ್ನೀ ಸಂಘ ಕುಟುಂಬಗಳ ಸಹಯೋಗದಲ್ಲಿ 'ಅನುಪಮ ವ್ಯಕ್ತಿತ್ವ ; ಅನರ್ಘ್ಯ ಸಂದೇಶ' ಎಂಬ ದ್ಯೇಯ ವಾಕ್ಯದೊಂದಿಗೆ ಮೀಲಾದ್ ಸಂದೇಶ ಜಾಥಾ ಅನ್ವಾರ್ ಕ್ಯಾಂಪಸ್'ನಿಂದ ಪ್ರಾರಂಭಗೊಂಡು ವಿರಾಜಪೇಟೆ ಪಟ್ಟಣದ ಮೂಲಕ ಕಾರ್ ಸ್ಟಾಂಡಿನಲ್ಲಿ ಸಮಾಪ್ತಿಗೊಂಡಿತು.

ಸಂಸ್ಥೆಯ ಸಾರಥಿ ಶೈಖುನಾ ಅಶ್ರಫ್ ಅಹ್ಸನಿ ದುಆ ಮೂಲಕ ರ‍್ಯಾಲಿಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನಾಯಿಬ್ ಖಾಝಿ ಶೈಖುನಾ ಶಾದುಲಿ ಫೈಝಿ ಉಸ್ತಾದ್, SYS ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ  ಹಫೀಝ್ ಸಅದಿ, ಸಂಸ್ಥೆಯ ಉಪಾಧ್ಯಕ್ಷರಾದ ಅಬೂಬಕ್ಕರ್ ಹಾಜಿ, ಮುಸ್ಲಿಂ ಜಮಾಅತ್ SYS, SYS ಜಿಲ್ಲಾ ನಾಯಕರು ಕಾರ್ಯಕರ್ತರು ಭಾಗವಹಿಸಿದ್ದರು. SYS ಜಿಲ್ಲಾ ಇಸಾಬಾ ತಂಡ ಹಾಗೂ ಹಲವು ಮೊಹಲ್ಲಾದ  ಧಫ್ ಹಾಗೂ ಸ್ಕೌಟ್ ತಂಡಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿದವು.

ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಗೈದ SSF  ರಾಷ್ಟ್ರೀಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿಯವರು ಅನುಪಮ ವ್ಯಕ್ತಿತ್ವದ ಪೈಗಂಬರ್ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿವಸಲ್ಲರವರು ಈ ಜಗತ್ತಿಗೆ ಸಾರಿದ ಸಂದೇಶಗಳು ನಿತ್ಯ ನೂತನವಾಗಿದ್ದು ಆಧುನಿಕ ಜಗತ್ತಿನ ಸರ್ವ ಸಮಸ್ಯೆಗಳಿಗೂ ಅವರ ಸಂದೇಶಗಳಲ್ಲಿ ಪರಿಹಾರವಿದ್ದು ಆಧುನಿಕ ತಲೆಮಾರು ಪ್ರವಾದಿವರ್ಯರ ಕುರಿತು ಆಳವಾಗಿ ಅಧ್ಯಯನ ನಡೆಸಬೇಕೆಂದರು.

ಸಂಸ್ಥೆಯ ಉಪಾಧ್ಯಕ್ಷರಾದ ಸಯ್ಯದ್ ಶಾಫಿ ಬಾಅಲವಿ ಮದೀನತುಲ್ ಮುನವ್ವರ  ಸಮಾರೋಪ ದುಆಗೆ ನೇತೃತ್ವ ವಹಿಸಿದ್ದರು. ಸ್ವಾಗತ ಸಮಿತಿ ಚೇರ್ಮನ್ ಅಹಮದ್ ಮದನಿ ಸ್ವಾಗತಿಸಿ ಕನ್ವೀನರ್ CRP ಉಮರ್ ಎಡಪಾಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News