ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ವಿವಿಯ ಇಬ್ಬರು ಪ್ರಾಧ್ಯಾಪಕರು

Update: 2022-10-26 04:48 GMT

ತುಮಕೂರು: ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯವು ಹೊರತಂದಿರುವ ವಿಶ್ವದ ಶ್ರೇಷ್ಠ ವಿಜ್ಞಾನಿಗಳ ಪಟ್ಟಿಯಲ್ಲಿ ತುಮಕೂರು ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಚ್.ನಾಗಭೂಷಣ ಹಾಗೂ ರಸಾಯನಶಾಸ್ತ್ರ ವಿಭಾಗದ ಸಂಯೋಜಕ ಡಾ.ಡಿ.ಸುರೇಶ್ ಸ್ಥಾನ ಪಡೆದಿದ್ದಾರೆ. 

ಅಂತರ್‌ ರಾಷ್ಟ್ರೀಯ ಮಟ್ಟದಲ್ಲಿ ಪ್ರಕಟಗೊಂಡ ಸಂಶೋಧನಾ ಪ್ರಕಟನೆಗಳು, ಉಲ್ಲೇಖಗಳು, ಸಂಶೋಧನಾ ಸಹಲೇಖನಗಳು ಹಾಗೂ ಎಚ್-ಇಂಡೆಕ್ಸ್ ಗಳನ್ನು ಪರಿಗಣಿಸಿ ಜಾಗತಿಕ ಮಟ್ಟದಲ್ಲಿ ಶ್ರೇಷ್ಠ ಶೇ.2 ವಿಜ್ಞಾನಿಗಳ ಪಟ್ಟಿಯನ್ನು ಇತ್ತೀಚೆಗೆ ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಇಬ್ಬರು ಪ್ರಾಧ್ಯಾಪಕರು ಗುರುತಿಸಿಕೊಂಡಿದ್ದಾರೆ.

ಜಾಗತಿಕ ಮಟ್ಟದಲ್ಲಿ ಸಿದ್ಧಪಡಿಸಲಾಗುವ ಈ ಪಟ್ಟಿಯಲ್ಲಿ ಒಟ್ಟು ಎರಡು ಲಕ್ಷದಷ್ಟು ಪ್ರಾಧ್ಯಾಪಕರಿದ್ದು, ಅವರನ್ನು 22 ವಿಭಾಗಗಳಲ್ಲಿ ಹಾಗೂ 176 ಉಪವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಭಾರತದ 3,796 ಪ್ರಾಧ್ಯಾಪಕರು ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ತುಮಕೂರು ವಿವಿ ಇದರಲ್ಲಿ ಸ್ಥಾನ ಪಡೆದಿರುವುದು ವಿಶೇಷವಾಗಿದೆ. ಡಾ. ನಾಗಭೂಷಣ ಹಾಗೂ ಡಾ. ಸುರೇಶ್‌ ಮೆಟೀರಿಯಲ್ಸ್, ಅಫ್ರೆಡ್ ಫಿಸಿಕ್ಸ್, ಫಿಸಿಕ್ಸ್ ಮತ್ತು ಆಸ್ಟೋನಮಿ ವಿಭಾಗದಲ್ಲಿ ಶ್ರೇಷ್ಠ ವಿಜ್ಞಾನಿಗಳ ಸ್ಥಾನ ಗಳಿಸಿದ್ದಾರೆ.

ಪಾವಗಡ ತಾಲೂಕಿಗೆ ಸೇರಿದ ಈ ಇಬ್ಬರು ಪ್ರಾಧ್ಯಾಪಕರು ತಮ್ಮ ಸ್ವಂತ ಜಿಲ್ಲೆಯ ವಿವಿಯಲ್ಲಿ ಸೇವೆ ಸಲ್ಲಿಸುತ್ತಾ ಅವಿಸ್ಮರಣೀಯ ಸಾಧನೆ ಮಾಡಿದ್ದಾರೆ. ತುಮಕೂರು ವಿವಿ ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು ಹಾಗೂ ಕುಲಸಚಿವರಾದ ಪ್ರೊ.ಕೆ.ಶಿವಚಿತ್ತಪ್ಪ ಅಭಿನಂದನೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News