ಕೊಳ್ಳೇಗಾಲ ನಗರಸಭೆ ಉಪಚುನಾವಣೆ: ಬಿಜೆಪಿ 6, ಕಾಂಗ್ರೆಸ್ 1 ಸ್ಥಾನದಲ್ಲಿ ಗೆಲುವು

ವರ್ಚಸ್ಸು ಉಳಿಸಿಕೊಂಡ ಶಾಸಕ ಎನ್.ಮಹೇಶ್

Update: 2022-10-31 06:33 GMT

ಚಾಮರಾಜನಗರ, ಅ.31: ಕೊಳ್ಳೇಗಾಲ ನಗರಸಭೆಗೆ ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಬಿಜೆಪಿ ಭರ್ಜರಿ ಸಾಧನೆ ಮಾಡಿದ್ದ, ಏಳು ಸ್ಥಾನಗಳಲ್ಲಿ ಆರರಲ್ಲಿ ಗೆದ್ದಿದೆ. ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆದ್ದರೆ, ಬಿಎಸ್ಪಿ ಶೂನ್ಯ ಸಾಧನೆ ಮಾಡಿದೆ.

ಹಿಂದೆ ಕೊಳ್ಳೇಗಾಲ ನಗರಸಭಾಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿದ್ದರಿಂದ 7 ಮಂದಿ ಬಿಎಸ್ಪಿ ಸದಸ್ಯರು ಅನರ್ಹಗೊಂಡಿದ್ದರು. ಶಾಸಕ ಎನ್.ಮಹೇಶ್ ಜೊತೆ ಗುರುತಿಸಿಕೊಂಡಿದ್ದ ಈ ಏಳು ಮಂದಿ ಬಳಿಕ ಮಹೇಶ್ ಜೊತೆ ಬಿಜೆಪಿ ಸೇರಿದ್ದರು. ಈ ನಡುವೆ ನಗರಸಭೆಯ ತೆರವಾದ ಏಳು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಬಿಎಸ್ಪಿಯಿಂದ ಅನರ್ಹಗೊಂಡ ಏಳೂ ಮಂದಿಗೆ ಶಾಸಕ ಎನ್.ಮಹೇಶ್ ಬಿಜೆಪಿಯಿಂದ ಟಿಕೆಟ್ ಕೊಡಿಸಿದ್ದರು. ಇದೀಗ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಏಳು ಮಂದಿಯಲ್ಲಿ ಆರು ಮಂದಿಯನ್ನು ಗೆಲ್ಲಿಸುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ 17, ಕಾಂಗ್ರೆಸ್ 10 ಅಭ್ಯರ್ಥಿಗಳ ಗೆಲುವು

Similar News