ವಿಜಯನಗರ: ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ಹೋದ ಸಹೋದರಿ ಸೇರಿ ನಾಲ್ವರು ನೀರುಪಾಲು

Update: 2022-11-02 14:33 IST
ವಿಜಯನಗರ: ಮುಳುಗುತ್ತಿದ್ದ ತಮ್ಮನನ್ನು ರಕ್ಷಿಸಲು ಹೋದ ಸಹೋದರಿ ಸೇರಿ ನಾಲ್ವರು ನೀರುಪಾಲು
  • whatsapp icon

ವಿಜಯನಗರ:  ಒಂದೇ ಕುಟುಂಬದ ಇಬ್ಬರು ಸೇರಿದಂತೆ ನಾಲ್ವರು ನೀರುಪಾಲಾಗಿದ್ದು, ಇಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಜಿಲ್ಲೆಯ (Vijayanagara district) ಚನ್ನಹಳ್ಳಿ ತಾಂಡದಲ್ಲಿ ಬುಧವಾರ ವರದಿಯಾಗಿದೆ. 

ಸಂಬಂಧಿಕರ ಮನೆಗೆ ಬಂದಿದ್ದ ವಿದ್ಯಾರ್ಥಿಗಳು ಸಮೀಪದಲ್ಲಿದ್ದ ಕೆರೆ ನೋಡಲು ಹೋಗಿದ್ದಾಗ ಘಟನೆ ಸಂಭವಿಸಿದೆನ್ನಲಾಗಿದೆ.

ವಿದ್ಯಾರ್ಥಿಗಳಾದ ನಂದಿಬೇವೂರು ತಾಂಡದ ಅಶ್ವಿನಿ ( 17), ಅವರ ಸಹೋದರ ಅಭಿಷೇಕ್ (14) , ಚೆನ್ನಹಳ್ಳಿ ತಾಂಡದ ಕಾವ್ಯ (19) ಮತ್ತು ತುಂಬಿನಕೇರಿ‌ ತಾಂಡದ ಅಪೂರ್ವ(14) ಎಂಬುವರೇ ನೀರುಪಾಲಾದ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. 

ಕೆರೆ ನೋಡಲು ಹೋಗಿದ್ದಾಗ ಅಭಿಷೇಕ್  ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ, ಆತನ ರಕ್ಷಣೆಗಿಳಿದು ಉಳಿದವರು ನೀರು ಪಾಲಾಗಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಇಬ್ಬರು ವಿದ್ಯಾರ್ಥಿಗಳ ಮೃತದೇಹ‌ ಪತ್ತೆಯಾಗಿದ್ದು, ಉಳಿದವರ ಮೃತದೇಹ ಪತ್ತೆ ಶೋಧ ಕಾರ್ಯ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

Similar News