ಎಎಂಎಸ್ ಪರೀಕ್ಷೆಯಲ್ಲಿ 3ನೇ ರ್‍ಯಾಂಕ್‌

ಮಡಿಕೇರಿ |ಡಾ.ಸಂಹಿತಾ ಹೆಗಡೆಗೆ "ಆಯುರ್ ವಿಶಾರದ" ಪ್ರಶಸ್ತಿ ಪ್ರದಾನ

Update: 2022-11-07 10:14 GMT


ಮಡಿಕೇರಿ ನ.7: ರಾಜೀವ್ ಗಾಂಧಿ ಯೂನಿವಸಿ೯ಟಿ ಆಫ್ ಹೆಲ್ತ್ ಸೈನ್ಸ್ ಮೂಲಕ ನಡೆದ ಬಿ .ಎ. ಎಂ .ಎಸ್ . ಪರೀಕ್ಷೆಯಲ್ಲಿ ಮಡಿಕೇರಿಯ ಡಾಕ್ಟರ್. ಸಂಹಿತಾ ಎಸ್ . ಹೆಗಡೆ  ವಿಶ್ವವಿದ್ಯಾನಿಲಯಕ್ಕೆ 3 ನೇ ರ್‍ಯಾಂಕ್‌ ಪಡೆದಿದ್ದಾರೆ.

ಮೈಸೂರಿನ ಜೆ .ಎಸ್ .ಎಸ್. ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ  ವ್ಯಾಸಂಗ ಮಾಡಿರುವ ಡಾಕ್ಟರ್  ಸಂಹಿತಾ ಎಸ್. ಹೆಗಡೆ ಅವರಿಗೆ ನ.4ರಂದು  ನಡೆದ ಘಟಿಕೋತ್ಸವದಲ್ಲಿ  ಸನ್ಮಾನಿಸಿ ಗೌರವಿಸಲಾಯಿತು.

ಕಾಲೇಜಿನಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ  ಹಿನ್ನಲೆಯಲ್ಲಿ  "ಆಯುರ್ ವಿಶಾರದ" ಎಂಬ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಇವರಿಗೆ ಕಾಲೇಜಿನ "ಅತ್ಯುತ್ತಮ ವಿದ್ಯಾರ್ಥಿನಿ" ಎಂಬ ಪ್ರಶಸ್ತಿ ಕೂಡ ಲಭಿಸಿದೆ. ಪ್ರಥಮ ವರ್ಷದಿಂದ ಅಂತಿಮ ವರ್ಷದವರೆಗೆ ವಿಶ್ವವಿದ್ಯಾನಿಲಯಕ್ಕೆ ಓವರ್ ಆಲ್ ಸಾಧನೆಗೆ 6ನೇ ರ್‍ಯಾಂಕ್‌ ಮತ್ತು   8 ವಿಷಯಗಳಲ್ಲಿ  ವಿಶ್ವವಿದ್ಯಾನಿಲಯಕ್ಕೆ  ರ್‍ಯಾಂಕ್‌  ಗಳಿಸಿ ಸಾಧನೆಯನ್ನು ಮಾಡಿರುವ ಸಂಹಿತಾ ಹೆಗಡೆ, ಮಡಿಕೇರಿಯ  ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಕಾಲೇಜುನಲ್ಲಿ ಪ್ರಾಧ್ಯಾಪಕರಾಗಿರುವ ಡಾಕ್ಟರ್ ಶ್ರೀಧರ್ ಆರ್ ಹೆಗಡೆ ಮತ್ತು ಸೈಂಟ್ ಜೋಸೆಫ್ ಪದವಿಪೂರ್ವ ಕಾಲೇಜಿನ  ಉಪನ್ಯಾಸಕಿ ನೀತಾ ಎಸ್ ಹೆಗಡೆ  ಪುತ್ರಿಯಾಗಿದ್ದಾರೆ.

Similar News