ಮೈಸೂರು: ಹಿಂದೂ ಸಂಪ್ರದಾಯದಂತೆ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿ ಸೌಹಾರ್ದ ಮೆರೆದ ಯುವಕರು

Update: 2022-11-13 18:43 GMT

ಮೈಸೂರು (Mysuru), ನ.13: ಮಂಡಿ ಮೊಹಲ್ಲಾದಲ್ಲಿ ಶುಕ್ರವಾರ ಮೃತಪಟ್ಟ ಮಹಿಳೆಯ ಶವಯಾತ್ರೆಗೆ ಯುವಕರು ಹೆಗಲು ನೀಡಿ ಅಂತ್ಯಸಂಸ್ಕಾರ ನೆರವೇರಿಸಿ ಸೌಹಾರ್ದ ಮೆರೆದಿದ್ದಾರೆ.

ಮಂಡಿ ಮೊಹಲ್ಲಾದ ಸುನ್ನಿ ಚೌಕ್‌ನಲ್ಲಿ ಶಿವಮ್ಮ ಎಂಬವರು 30 ವರ್ಷಗಳಿಂದ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೆಲದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿ, ಶುಕ್ರವಾರ ರಾತ್ರಿ ನಿಧನರಾಗಿದ್ದು, ವಿಷಯ ತಿಳಿದ ಇಸ್ಲಾಮಿಯಾ ನೌಜವಾನ್ ಸಮಿತಿ ಸದಸ್ಯರು ಮೃತರ ಸಂಬಂಧಿಕರ ಬಗ್ಗೆ ಗಾಂಧಿನಗರ, ಕೈಲಾಸಪುರದ ಸುತ್ತಲೂ ವಿಚಾರಿಸಿದಾಗ ಮೃತರ ಇಬ್ಬರು ಮಕ್ಕಳು ಗಾಂಧಿನಗರದಲ್ಲಿ ವಾಸಿಸುತ್ತಿರುವುದು ತಿಳಿದು ಬಂದಿದೆ.

ಮಹಿಳೆಯ ಮೃತದೇಹವನ್ನು ಕೊಂಡೊಯ್ಯುವಂತೆ ಮಕ್ಕಳಿಗೆ ಮನವಿ ಮಾಡಿದ್ದಾರೆ. ಆದರೆ ಮಕ್ಕಳು ಮೃತದೇಹವನ್ನು ಕೊಂಡೊಯ್ಯಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಶನಿವಾರ ಬೆಳಗ್ಗೆಯವರೆಗೂ ಮೃತರ ಸಂಬಂಧಿಕರೂ ಯಾರೂ ಬರದ ಹಿನ್ನೆಲೆಯಲ್ಲಿ ಮಂಡಿ ಮೊಹಲ್ಲದ ಯುವಕರು ಹಿಂದೂ ಸಂಪ್ರದಾಯದಂತೆ ಮೃತ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ ಎನ್ನಲಾಗಿದೆ.

''ಮೈಸೂರಿನ ಜೋಡಿ ತೆಂಗಿನ ಮರದ ಬಳಿಯಿರುವ ಸ್ಮಶಾನಕ್ಕೆ 2,500 ರೂ. ಶುಲ್ಕ ಕಟ್ಟಿ ಹಿಂದೂ ಸಂಪ್ರದಾಯದಂತೆ ಮೃತ ಮಹಿಳೆಯ ಅಂತ್ಯಸಂಸ್ಕಾರ ನೆರವೇರಿಸಲಾಯಿತು''

- ಸುಹೇಲ್ ಬೇಗ್, ಮಾಜಿ ಕಾರ್ಪೊರೇಟರ್

      

Full View

Similar News