'ಕ್ಷುಲ್ಲಕ, ಅನಗತ್ಯ ದಾವೆ': ಸರಕಾರದ ವಿರುದ್ಧ ಹೈಕೋರ್ಟ್ ಅಸಮಾಧಾನ

Update: 2022-11-27 15:36 GMT

ಬೆಂಗಳೂರು, ನ.27: ಕ್ಷುಲ್ಲಕ ಹಾಗೂ ಅನಗತ್ಯ ದಾವೆ ಹೂಡಿ ನ್ಯಾಯಾಂಗದ ಅಮೂಲ್ಯ ಸಮಯ ವ್ಯರ್ಥಗೊಳಿಸಿದ ರಾಜ್ಯ ಸರಕಾರಕ್ಕೆ ಚಾಟಿ ಬೀಸಿರುವ ಹೈಕೋರ್ಟ್, ಇನ್ನು ಮುಂದೆ ಕಾನೂನು ಇಲಾಖೆಯ ಅಭಿಪ್ರಾಯಕ್ಕೆ ವಿರುದ್ಧವಾಗಿ ಸರಕಾರ ಹೂಡಿದ ಅನಗತ್ಯ ದಾವೆ ನ್ಯಾಯಾಲಯದಿಂದ ವಜಾಗೊಂಡರೆ, ಅಂಥಹಾ ಅರ್ಜಿ ಸಲ್ಲಿಕೆಗೆ ಕಾರಣವಾದ ಅಧಿಕಾರಿಯಿಂದಲೇ ವ್ಯಾಜ್ಯದ ಖರ್ಚು ವಸೂಲಿ ಮಾಡಬೇಕೆಂದು ಸರಕಾರಕ್ಕೆ ಮಹತ್ವದ ಆದೇಶ ಮಾಡಿದೆ.  

ಅಕ್ರಮ ಆಸ್ತಿ ಸಂಪಾದನೆ ಆರೋಪ ಕುರಿತಂತೆ ನಿವೃತ್ತ ಸಹಾಯಕ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ವಿರುದ್ಧದ ಶಿಸ್ತುಕ್ರಮ ರದ್ದುಪಡಿಸಿದ್ದ ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸರಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ಮಾಡಿದೆ. 

ಅನಗತ್ಯ ದಾವೆ ಸಲ್ಲಿಸುವುದಕ್ಕೆ ನ್ಯಾಯಾಲಯವನ್ನು ಕಸದ ತೊಟ್ಟಿಗಳಂತೆ ಪರಿಗಣಿಸಬಾರದು ಎಂದ ನ್ಯಾಯಪೀಠ, ಕ್ಷುಲ್ಲಕ ವ್ಯಾಜ್ಯ ನಿಯಂತ್ರಣಕ್ಕೆ ಕೆಲ ನಿರ್ದೇಶನ ನೀಡಿದೆ. 

Similar News