ಜಗನ್ ಮೋಹನ್ ರೆಡ್ಡಿ ಸಹೋದರಿ ಶರ್ಮಿಳಾ ಕುಳಿತಿದ್ದ ಕಾರನ್ನು ಕ್ರೇನ್ ಮೂಲಕ ಎಳೆದೊಯ್ದ ತೆಲಂಗಾಣ ಪೊಲೀಸರು

Update: 2022-11-29 10:19 GMT

ಹೈದರಾಬಾದ್: ತೆಲಂಗಾಣ ರಾಜಕಾರಣಿ ಹಾಗೂ  ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈಎಸ್ ಶರ್ಮಿಳಾ ಅವರು ಕುಳಿತ್ತಿದ್ದ ಕಾರನ್ನು ಪೊಲೀಸರು ಕ್ರೇನ್ ಮೂಲಕ ಬಲವಂತವಾಗಿ ಎಳೆದೊಯ್ದಿರುವ  ಆಘಾತಕಾರಿ ದೃಶ್ಯಗಳು ಇಂದು ಹೈದರಾಬಾದ್‌ನ ಬೀದಿಗಳಲ್ಲಿ ಕಂಡುಬಂತು .

ಶರ್ಮಿಳಾ ಅವರ ವೈಎಸ್ಆರ್ ತೆಲಂಗಾಣ ಪಕ್ಷವು ಕೆ.  ಚಂದ್ರಶೇಖರ್ ರಾವ್ ಸರಕಾರದ ವಿರುದ್ಧ ಪಾದಯಾತ್ರೆಯನ್ನು ಆರಂಭಿಸಿದೆ ಹಾಗೂ  ವಾರಂಗಲ್‌ನಲ್ಲಿ ಅವರ ಬೆಂಬಲಿಗರು ಮತ್ತು ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಕರ್ತರ ನಡುವಿನ ಘರ್ಷಣೆಯ ನಂತರ ಅವರನ್ನು ನಿನ್ನೆ ಸ್ವಲ್ಪ ಸಮಯ ವಶಕ್ಕೆ ಪಡೆಯಲಾಗಿತ್ತು. ಶರ್ಮಿಳಾ ಅವರ ಪಾದಯಾತ್ರೆ ಇಲ್ಲಿಯವರೆಗೆ ಸುಮಾರು 3,500-ಕಿಮೀ ಕ್ರಮಿಸಿದ್ದು, ಕೆಸಿಆರ್ ನೇತೃತ್ವದ ಸರಕಾರವನ್ನು ಭ್ರಷ್ಟಾಚಾರದ ಆರೋಪವನ್ನು ಗುರಿಯಾಗಿಸಿದೆ.

ಇಂದು ಬೆಳಿಗ್ಗೆ ಅವರು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಪಕ್ಷದ ಪ್ರತಿಭಟನಾ ರ್ಯಾಲಿಯನ್ನು ಸೇರಿಕೊಂಡಿದ್ದರು. ಅವರು  ನಿನ್ನೆಯ ಘರ್ಷಣೆಯಲ್ಲಿ ಜಖಂಗೊಂಡಿದ್ದ ತನ್ನ ಕಾರನ್ನು ಏರಿದ ಕೂಡಲೇ ಪೊಲೀಸರು ನಗರದ ಬೀದಿಗಳಲ್ಲಿ ವಾಹನವನ್ನು ಎಳೆದೊಯ್ಯಲು ಬಳಸುವ  ಕ್ರೇನ್ ಅನ್ನು ತಂದು ಶರ್ಮಿಳಾ ಕಾರನ್ನು ಎಳೆದೊಯ್ದರು.

ಕ್ರೇನ್ ಕಾರನ್ನು  ಎಳೆದುಕೊಂಡು ಹೋಗುತ್ತಿರುವಾಗ  ಶರ್ಮಿಳಾ ಕಾರಿನಲ್ಲಿ ಕುಳಿತಿರುವ, ಮಾಧ್ಯಮದವರು ಹಾಗೂ ಶರ್ಮಿಳಾ ಬೆಂಬಲಿಗರು ಜೊತೆಯಲ್ಲೇ ಓಡುತ್ತಿರುವ ದೃಶ್ಯ ಕಂಡುಬಂದಿವೆ.

Similar News