ಮಹಿಳೆಯ ಜೀವನಾಂಶ 20 ಸಾವಿರ ರೂ.ಗೆ ಹೆಚ್ಚಿಸಿ ಹೈಕೋರ್ಟ್ ಆದೇಶ

Update: 2022-12-11 16:25 GMT

ಬೆಂಗಳೂರು, ಡಿ.11: ಬದಲಾಗುತ್ತಿರುವ ಕಾಲಘಟ್ಟ ಮತ್ತು ಏರುತ್ತಿರುವ ಜೀವನ ವೆಚ್ಚವನ್ನು ಜೀವನಾಂಶ ಹೆಚ್ಚಳಕ್ಕೆ ಮಾನದಂಡವಾಗಿ ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಕೌಟುಂಬಿಕ ಕೇಸ್‍ವೊಂದರಲ್ಲಿ ಮಹಿಳೆಯೊಬ್ಬರಿಗೆ ಆರು ವರ್ಷಗಳ ಹಿಂದೆ ನಿಗದಿಯಾಗಿದ್ದ 10 ಸಾವಿರ ರೂ. ಜೀವನಾಂಶವನ್ನು 20 ಸಾವಿರ ರೂ.ಗಳಿಗೆ ಹೆಚ್ಚಿಸಿ ಆದೇಶಿಸಿದೆ.

ಜೀವನಾಂಶ ಹೆಚ್ಚಳಕ್ಕೆ ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಕ್ರಮ ಪ್ರಶ್ನಿಸಿ ಬೆಂಗಳೂರಿನ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

ಕೌಟುಂಬಿಕ ಕಲಹದಿಂದ ವಿಚ್ಛೇದನಕ್ಕಾಗಿ ಮಹಿಳೆಯ ಪತಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರ ಮಹಿಳೆಗೆ 2016ರಲ್ಲಿ ನ್ಯಾಯಾಲಯವು 10 ಸಾವಿರ ರೂ.ಜೀವನಾಂಶವನ್ನು ನಿಗದಿಪಡಿಸಿತ್ತು. ಆ ಮೊತ್ತವನ್ನು ಹೆಚ್ಚಿಸುವಂತೆ ಅರ್ಜಿದಾರರು 2019ರಲ್ಲಿ ಮತ್ತೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ, ಜೀವನಾಂಶ ಹೆಚ್ಚಳಕ್ಕೆ ನಿರಾಕರಿಸಿತ್ತು. ಅದನ್ನು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೊರೆ ಹೋಗಿದ್ದರು.  

Similar News