ಮೈಸೂರು | ನಕಲಿ ದಾಖಲೆ ಸೃಷ್ಟಿಸಿ ಜಮೀನು ಖಾತೆ ಮಾಡಿದ ಆರೋಪ: ತಹಶೀಲ್ದಾರ್, ಆರ್ ಐ ಸೇರಿ ಐವರ ವಿರುದ್ಧ FIR

Update: 2022-12-20 16:46 GMT

ಮೈಸೂರು,ಡಿ.20: ನಕಲಿ ದಾಖಲೆ ಸೃಷ್ಟಿಸಿ  ಅಕ್ರಮವಾಗಿ ಜಮೀನು ಖಾತೆ ಮಾಡಿಸಿದ ಆರೋಪದ ಮೇಲೆ ತಹಶೀಲ್ದಾರ್,  ಗ್ರಾಮಲೆಕ್ಕಿಗ ಹಾಗೂ ರೆವಿನ್ಯೂ ಇನ್ಸ್ ಪೆಕ್ಟರ್ ಸೇರಿ ಐವರ ವಿರುದ್ಧ ವರುಣಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.

ಅನಿವಾಸಿ ಭಾರತೀಯ ರವಿ ಎಂಬುವವರ ತಂದೆಗೆ ಸೇರಿದ್ದ 1.08 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ  ಅಕ್ರಮವಾಗಿ ಖಾತೆ ಮಾಡಿಸಿಕೊಂಡ ಆರೋಪದ ಮೇಲೆ ಮೈಸೂರು ತಾಲೂಕು ವರುಣಾ ಹೋಬಳಿಯ ದೇವೇಗೌಡನಹುಂಡಿ ಗ್ರಾಮದ ನಿವಾಸಿ ಮರೀಗೌಡ, ಶಿವರಾಂ ಹಾಗೂ ಇವರಿಗೆ ಸಹಕರಿಸಿದ  ಗ್ರಾಮಲೆಕ್ಕಿಗ ಮಹೇಶ್, ರೆವಿನ್ಯೂ ಇನ್ಸ್ ಪೆಕ್ಟರ್ ಹಾಗೂ ತಹಶೀಲ್ದಾರ್ ವಿರುದ್ಧ ವರುಣಾ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ .

Similar News