ಸಕಲೇಶಪುರ: ಹಾವು ಕಚ್ಚಿ 3 ವರ್ಷದ ಮಗು ಮೃತ್ಯು
ಸಕಲೇಶಪುರ, ಡಿ.23: ಹಾವು ಕಚ್ಚಿ ಮಗುವೊಂದು ಮೃತಪಟ್ಟಿರುವ ಘಟನೆ ಬುಧವಾರ ತಾಲೂಕಿನ ಯಸಳೂರು ಹೋಬಳಿ ದೊಡ್ಡ ಕಲ್ಲೂರು ಗ್ರಾಮದ ಅಂಗನವಾಡಿ ಬಳಿ ನಡೆದಿದೆ.
ರೋಶನ್ (3) ಮೃತಪಟ್ಟ ಮಗು ಎಂದು ತಿಳಿದು ಬಂದಿದೆ. ಇಂದು ಬೆಳಿಗ್ಗೆ ಅಂಗನವಾಡಿಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಇದ್ದ ಹಾವನ್ನು ಹಿಡಿಯಲು ಹೋದ ವೇಳೆ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ.
ಹಾವು ಕಚ್ಚಿದ ತಕ್ಷಣ ಸ್ಥಳೀಯರು ಬಾಲಕನಿಗೆ ಹೆತ್ತೂರು ಗ್ರಾಮದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ತಂದು ಅಲ್ಲಿಯ ವೈದ್ಯರ ಶಿಫಾರಸಿನ ಮೇರೆಗೆ ಹಾಸನದ ಆಸ್ಪತ್ರೆಗೆ ತರುವಾಗ ಮಾರ್ಗ ಮಧ್ಯದಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಹಾಸನದ ಸರ್ಕಾರಿ ಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿ, ರಾತ್ರಿ ಕುಟುಂಬಕ್ಕೆ ಬಾಲಕನ ಶವ ಹಸ್ತಾಂತರಿಸಿದರು.
ಇದನ್ನೂ ಓದಿ: VIDEO- ಈಗ ಎಷ್ಟು ಬೇಕೋ ಅಷ್ಟು ಸಾಲ ಮಾಡಿ, ಕುಮಾರಣ್ಣ ಅಧಿಕಾರಕ್ಕೆ ಬಂದು ಮನ್ನಾ ಮಾಡ್ತಾರೆ: ಅನಿತಾ ಕುಮಾರಸ್ವಾಮಿ