ಮಡಿಕೇರಿ | ದ್ವಿ ಚಕ್ರ ವಾಹನ ಢಿಕ್ಕಿ; ರಸ್ತೆ ಬದಿ ಆಟವಾಡುತ್ತಿದ್ದ ಮಗು ಸ್ಥಳದಲ್ಲೇ ಮೃತ್ಯು

Update: 2022-12-27 17:53 GMT

ಮಡಿಕೇರಿ ಡಿ.27: ಮಡಿಕೇರಿ ಬಳಿಯ ಮೇಕೇರಿ ಗ್ರಾಮದ ರಾಜ್ಯ ಹೆದ್ದಾರಿಯಲ್ಲಿ ದ್ವೀಚಕ್ರವಾಹನ ಡಿಕ್ಕಿಯಾಗಿ 5 ವರ್ಷದ ಮಗುವೊಂದು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. 

ಮಂಗಳವಾರ ಸಂಜೆ 6ಗಂಟೆ ವೇಳೆಗೆ ರಸ್ತೆ ಬದಿ ಆಟವಾಡುತ್ತಿದ್ದ ಅಸ್ಸಾಮ್ ಮೂಲದ ಅಸ್ಮಾ ಹಾಗು ಇದ್ರಿಸ್ ಅಲಿ ದಂಪತಿ ಪುತ್ರಿ 5 ವರ್ಷದ ಅಲಿಝಾ ಮೇಲೆ ವಿರಾಜಪೇಟೆ ಮೂರ್ನಾಡು ಕಡೆಯಿಂದ ಬರುತಿದ್ದ ದ್ವಿ ಚಕ್ರ ವಾಹನ ಢಿಕ್ಕಿ ಹೊಡೆದಿದೆ. ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.

ಬೈಕ್ ಸವಾರ ಮೂರ್ನಾಡು ಗ್ರಾಮದ ಸಚಿನ್ ಎಂದು ಗುರುತಿಸಲಾಗಿದ್ದು, ಆತನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮಗುವಿನ ಮೃತದೇಹವನ್ನು ಇಡಲಾಗಿದೆ.

ಜಿಲ್ಲಾಸ್ಪತ್ರೆಗೆ ಪೊಲೀಸ್ ಉಪವರಿಷ್ಠಾಧಿಕಾರಿ ಗಜೇಂದ್ರ ಪ್ರಸಾದ್ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮೃತ ಮಗುವಿನ ಪೋಷಕರು ಮೇಕೇರಿ ಗ್ರಾಮದ ಧಣೇಶ್ ಎಂಬುವವರ ತೋಟದ ಲೈನ್ ಮನೆಯಲ್ಲಿ ಕಳೆದ ಮೂರು ತಿಂಗಳಿನಿಂದ ವಾಸವಿದ್ದಾರೆ.

ಇದನ್ನೂ ಓದಿ: ಹಾವೇರಿಯಲ್ಲಿ ರಸ್ತೆ ಅಪಘಾತ; ಕಾಸರಗೋಡು ಮೂಲದ ದಂಪತಿ ಸ್ಥಳದಲ್ಲೇ ಮೃತ್ಯು

Similar News